×
Ad

ನಿಬ್ರಾಸುಲ್ ಹುದಾ ಸಂಗಮ, ಪ್ರಾರ್ಥನಾ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮ

Update: 2020-03-05 17:44 IST

ಬೆಳ್ತಂಗಡಿ, ಮಾ.5: ಶೈಖುನಾ ಅಲ್ ಹಾಜ್ ಪಿ.ಕೆ ಮುಹಮ್ಮದ್ ಮದನಿ ಅಳಕೆ ಉಸ್ತಾದರ ಶಿಷ್ಯ ಸಂಘಟನೆಯಾದ ನಿಬ್ರಾಸುಲ್ ಹುದಾ ಅಸೊಶಿಯೇಶನ್ ವತಿಯಿಂದ ಉಸ್ತಾದರ ಮನೆಯಲ್ಲಿ ಪ್ರಾರ್ಥನಾ ಸಂಗಮ, ಜಲಾಲಿಯಾ ರಾತೀಬ್ ಮತ್ತು ಅಜ್ಮೀರ್ ಮೌಲಿದ್, ದಿಕ್ರ್ ಮಜ್ಲಿಸ್, ಖತ್ಮುಲ್ ಕುರ್ ಆನ್, ಓಲ್ಡ್ ಸ್ಟೂಡೆಂಟ್ ಮೀಟ್ ಕಾರ್ಯಕ್ರಮವು ಶೈಖುನಾ ಪಿ.ಕೆ ಉಸ್ತಾದರ ಅದ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರಾಯ ಕಾಸಿಮ್ ಮದನಿ ಉಸ್ತಾದ್ ನಿರ್ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಗಮಿಸಿದ ಸೆಯ್ಯದ್ ಹಬೀಬುಲ್ಲಾ ತಂಗಳ್ ಕುಪ್ಪೆಟ್ಟಿ ಮುಖ್ಯ ಪ್ರಭಾಷಣ ಮಾಡಿದರು. ಜಲಾಲಿಯಾ ದಿಕ್ರ್ ಮಜ್ಲಿಸ್ ನ ನೇತ್ರತ್ವವನ್ನು ಮಸೂದ್ ಸಅದಿ ಪದ್ಮುಂಜೆ ವಹಿಸಿದ್ದರು. ನಿಬ್ರಾಸುಲ್ ಹುದಾ ಅಸೊಶಿಯೇಶನ್ ಸದಸ್ಯ ಆದಮ್ ಮದನಿ ಅತೂರು, ಅಶ್ರಫ್ ಮುಸ್ಲಿಯಾರ್ ಮುಳೂರು, ಹಸೈನಾರ್ ಆನೆಮಹಲ್ ಅವರನ್ನು ನೆನಪಿನ ಕಾಣಿಕೆ ಮತ್ತು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೈದರ್ ಮದನಿ ಕರಾಯ, ಅಬ್ದುರಹ್ಮಾನ್ ಸಖಾಫಿ, ಕೆ.ವಿ ಉಸ್ತಾದ್ ಕುದ್ರಡ್ಕ, ಸಿದ್ದೀಖ್ ಸಅದಿ ಸುನ್ನಿ ಸೆಂಟರ್ ಮುಳೂರು, ಡಾ.ಎಮ್.ಎಸ್. ಇಬ್ರಾಹಿಮ್ ಮುಸ್ಲಿಯಾರ್ ಶಿಕಾರಿಪುರ, ಸಲಾಮ್ ಮದನಿ ಹಾಗು ನಿಬ್ರಾಸುಲ್ ಹುದಾ ಅಸೊಶಿಯೇಶನ್ ಇದರ ಪದಾಧಿಕಾರಿಗಳು, ಉಸ್ತಾದರ ನೂರಾರು ಶಿಷ್ಯಂದಿರು ಭಾಗವಹಿಸಿದ್ದರು.

ನಿಬ್ರಾಸುಲ್ ಹುದಾ ಅಸೊಶಿಯೇಶನ್ ಅಧ್ಯಕ್ಷ ಆದಮ್ ಮದನಿ ಅತೂರು ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಮುಳೂರು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News