ದ್ವಿತೀಯ ಪಿಯುಸಿ ಪರೀಕ್ಷೆ: ದ.ಕ.ಜಿಲ್ಲೆಯಲ್ಲಿ 4 ವಿದ್ಯಾರ್ಥಿಗಳು ಗೈರು
Update: 2020-03-05 18:58 IST
ಮಂಗಳೂರು, ಮಾ.5: ದ.ಕ. ಜಿಲ್ಲೆಯ 51 ಕೇಂದ್ರಗಳಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ 4 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಟ್ಟು ಮೂರು ಪರೀಕ್ಷೆಗೆ 242 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಆ ಪೈಕಿ 238 ಮಂದಿ ಹಾಜರಾಗಿದ್ದಾರೆ.
ಮಲಯಾಳಂ ಪರೀಕ್ಷೆಗೆ ಹೆಸರು ನೋಂದಾಯಿಸಿದ 14 ಮಂದಿಯೂ ಹಾಜರಾಗಿದ್ದಾರೆ. ಅರಬಿಕ್ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 56 ಮಂದಿಯ ಪೈಕಿ 55 ಮಂದಿ ಹಾಜರಾಗಿದ್ದಾರೆ. ಫ್ರೆಂಚ್ ಭಾಷೆಯ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 172 ಮಂದಿಯ ಪೈಕಿ 169 ಮಂದಿ ಗೈರು ಹಾಜರಾಗಿದ್ದಾರೆ.
* ಶುಕ್ರವಾರ ಕರ್ನಾಟಕ ಮ್ಯೂಸಿಕ್ ಮತ್ತು ಹಿಂದುಸ್ತಾನಿ ಮ್ಯೂಸಿಕ್ ಪರೀಕ್ಷೆ ನಡೆಯಲಿದೆ.