ತೋನ್ಸೆ ಗ್ರಾಪಂ: ಸಾಕು ನಾಯಿಗಳಿಗೆ ಉಚಿತ ಲಸಿಕೆ
Update: 2020-03-05 19:02 IST
ಉಡುಪಿ, ಮಾ. 5: 31ನೇ ತೋನ್ಸೆ (ಕೆಮ್ಮಣ್ಣು) ಗ್ರಾಮಪಂಚಾಯತ್ ಮತ್ತು ಪಶುಸಂಗೋಪನಾ ಇಲಾಖೆಯ ಪಶುಚಿಕಿತ್ಸಾಲಯದ ಜಂಟಿ ಆಶ್ರಯ ದಲ್ಲಿ ನಿರ್ಮಲ ತೋನ್ಸೆ ಹಾಗೂ ಸೌಹಾರ್ದ ಸಮಿತಿಯ ಸಹಕಾರದಿಂದ ಸಾಕುನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗ ನಿರೋಧಕ ಲಸಿಕೆಗಳನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಪ್ರದೇಶಗಳಲ್ಲಿ ಈ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ತೋನ್ಸೆ ಗ್ರಾಪಂನ ಪ್ರಕಟಣೆ ಗ್ರಾಮಸ್ಥರಲ್ಲಿ ಮನವಿ ಮಾಡಿದೆ.