×
Ad

ಮುಸ್ಲಿಮರ ಹತ್ಯಾಕಾಂಡ ನಡೆಸುವ ಉಗ್ರವಾದಿಗಳನ್ನು ಭಾರತ ಸರಕಾರ ತಡೆಯಲಿ: ಇರಾನ್ ನಾಯಕ ಖಾಮಿನೈ

Update: 2020-03-05 21:59 IST
Photo: twitter.com/khamenei_ir

ಟೆಹರಾನ್ (ಇರಾನ್), ಮಾ. 5: ದಿಲ್ಲಿಯಲ್ಲಿ ಎರಡು ವಾರಗಳ ಹಿಂದೆ ಸಂಭವಿಸಿದ ಹಿಂಸಾಚಾರವನ್ನು ಗುರುವಾರ ಖಂಡಿಸಿರುವ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ, ಭಾರತ ಸರಕಾರವು ಉಗ್ರವಾದಿ ಹಿಂದೂಗಳನ್ನು ಎದುರಿಸಬೇಕು ಹಾಗೂ ಮುಸ್ಲಿಮರ ‘ಹತ್ಯಾಕಾಂಡ’ವನ್ನು ತಡೆಯಬೇಕು ಎಂದು ಹೇಳಿದ್ದಾರೆ.

 ‘‘ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಜಗತ್ತಿನಾದ್ಯಂತವಿರುವ ಮುಸ್ಲಿಮರ ಹೃದಯಗಳು ರೋದಿಸುತ್ತಿವೆ. ಉಗ್ರವಾದಿ ಹಿಂದೂಗಳು ಮತ್ತು ಅವರ ಪಕ್ಷಗಳನ್ನು ಭಾರತ ಸರಕಾರವು ನಿಯಂತ್ರಿಸಬೇಕು ಹಾಗೂ ಇಸ್ಲಾಮ್ ಜಗತ್ತಿನಿಂದ ಭಾರತ ಪ್ರತ್ಯೇಕಗೊಳ್ಳುವುದನ್ನು ತಡೆಯಲು ಮುಸ್ಲಿಮರ ಹತ್ಯಾಕಾಂಡವನ್ನು ನಿಲ್ಲಿಸಬೇಕು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ದಿಲ್ಲಿ ಹಿಂಸಾಚಾರದಲ್ಲಿ 49 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News