ಮನೆಯಿಂದ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಮೈಕ್ರೋಸಾಫ್ಟ್ ಸೂಚನೆ
Update: 2020-03-05 22:04 IST
ವಾಶಿಂಗ್ಟನ್, ಮಾ. 5: ಅಮೆರಿಕದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನವೈರಸ್ ಸಂಪರ್ಕಕ್ಕೆ ತನ್ನ ಉದ್ಯೋಗಿಗಳು ಬರುವುದನ್ನು ತಡೆಯುವ ಕ್ರಮವಾಗಿ, ಮನೆಯಿಂದಲೇ ಕೆಲಸ ಮಾಡುವಂತೆ ಅವರಿಗೆ ಮೈಕ್ರೋಸಾಫ್ಟ್ ಕಂಪೆನಿ ಸೂಚಿಸಿದೆ.
ಸಿಯಾಟಲ್‌ನಲ್ಲಿರುವ ತನ್ನ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯದಲ್ಲಿರುವ ಕಚೇರಿಗಳ ಸಮೀಪ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಕಂಪೆನಿ ಈ ಕ್ರಮ ತೆಗೆದುಕೊಂಡಿದೆ.