ಬ್ರಹ್ಮಾವರ: ಪದವಿ ವಿದ್ಯಾರ್ಥಿ ಆತ್ಮಹತ್ಯೆ; 4 ಪ್ರಾಧ್ಯಾಪಕರ ವಿರುದ್ಧ ದೂರು

Update: 2020-03-05 16:37 GMT

ಬ್ರಹ್ಮಾವರ, ಫೆ.5: ಹೆಬ್ರಿ ಸರಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದ ಚರಣ್ ಎಂಬವರು ಬುಧವಾರ ಅಪರಾಹ್ನ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೈಲಾನ್ ಹಗ್ಗ ಕಟ್ಟಿ ಅವರಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಮುನ್ನ ಬರೆದಿಟ್ಟ ಮರಣಪತ್ರದಲ್ಲಿ ತನ್ನ ಸಾವಿಗೆ ಕಾಲೇಜಿನ ನಾಲ್ವರು ಪ್ರಾಧ್ಯಾಪಕರು ನೀಡಿದ ಮಾನಸಿಕ ಕಿರುಕುಳವೇ ಕಾರಣವೆಂದು ಆರೋಪಿಸಿದ್ದಾರೆ.

ಚರಣ (19) ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಗೋವೆಕೊಡ್ಲು ಕೊತ್ತೂರು ಚಂದ್ರ ಶೆಟ್ಟಿ ಎಂಬವರ ಮಗನಾಗಿದ್ದು, ಕಾಲೇಜಿಗೆ ಸರಿಯಾಗಿ ಹೋಗದೇ ಹಾಜರಾತಿ ಕಡಿಮೆ ಇದ್ದುದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಕೂರಲು ಹಾಲ್‌ಟಿಕೇಟ್ ನೀಡಿರಲಿಲ್ಲ ಎಂದು ತಂದೆ ಬ್ರಹ್ಮಾವರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಚರಣ್ ಪ್ಯಾಂಟ್‌ಕಿಸೆಯಲ್ಲಿದ್ದ ಮೊಬೈಲ್ ಕವರಿನ ಒಳಗೆ ಚೀಟಿಯೊಂದರಲ್ಲಿ ಆತ ಬರೆದ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ನಾನು ಸಾಯ್ತೆ ಇದ್ದೀನಿ. ಯಾಕೆಂದರೆ ನನಗೆ ನನ್ನ ಕಾಲೇಜ್‌ನಲ್ಲಿ ಮಾನಸಿಕ ಹಿಂಸೆ ಕೊಡ್ತಾ ಇದ್ದಾರೆ. ಇದಕ್ಕೆ ಶಿಕ್ಷಕರಾದ ವಿಘ್ನೇಶ್ ಸರ್, ಗಣಪತಿ ಸರ್, ಮಂಜುನಾಥ ಸರ್, ವಿಷ್ಣುಮೂರ್ತಿ ಸರ್ ನನಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ವಿಘ್ನೇಶ್ ಸರ್ ನನಗೆ ಟಾರ್ಗೆಟ್ ಮಾಡಿದ್ದರು ಎಂದು ಬರೆದುಕೊಂಡಿದ್ದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News