ಬೈಂದೂರು: ಬೈಕ್‌ಗಳ ನಡುವೆ ಢಿಕ್ಕಿ; ಓರ್ವ ಮೃತ್ಯು
Update: 2020-03-05 22:07 IST
ಬೈಂದೂರು, ಮಾ.5: ಬೈಕ್‌ಗಳೆರಡು ಪರಸ್ಪರ ಢಿಕ್ಕಿ ಹೊಡೆದು ಒಂದು ಬೈಕ್‌ನ ಚಾಲಕ ಮೃತಪಟ್ಟು ಉಳಿದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗೋಳಿಹೊಳೆ ಮಸೀದಿಯ ಬಳಿ ಬುಧವಾರ ರಾತ್ರಿ 9ಗಂಟೆ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಒಂದು ಬೈಕ್‌ನ ಸವಾರರಾದ ಸುಧೀರ್ ಗೌಡ(25) ಎಂದು ಗುರುತಿಸಲಾಗಿದೆ. ಈ ಬೈಕಿನಲ್ಲಿ ಸಹ ಸವಾರರಾಗಿದ್ದ ಇಡೂರು ಗ್ರಾಮದ ಸಾರ್ಕಲ್ಲುವಿನ ಸುರೇಂದ್ರ ಗೌಡ ಮತ್ತೊಂದು ಬೈಕ್‌ನ ಸವಾರ ನವೀನ್ ಹಾಗೂ ಸಹ ಸವಾರ ತೆಗ್ಗರ್ಸೆ ಶ್ರೀನಿವಾಸ ಶೇರುಗಾರ ಸಹ ಗಾಯಗೊಂಡಿದ್ದು, ಬೈಂದೂರಿನ ಸಮುದಾಯ ಆಸ್ಪತ್ರೆ ಹಾಗೂ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರೇಂದ್ರ ಗೌಡ ಅವರು ಸುಧೀರ್‌ಗೌಡರ ಬೈಕ್‌ನಲ್ಲಿ ತೊಂಡ್ಕೆಯಿಂದ ಗೋಳಿಹೊಳೆ ಮೂರೈಗೆ ಸಾಮಾನು ತರಲು ರಾತ್ರಿ 9ಗಂಟೆಗೆ ಹೋಗುತಿದ್ದಾಗ, ಗೋಳಿಹೊಳೆ ಮಸೀದಿಯಿಂದ ಸ್ವಲ್ಪ ಮುಂದೆ ತಿರುವಿನಲ್ಲಿ ಕೊಲ್ಲೂರು ಕಡೆಯಿಂದ ಬಂದ ಬೈಕ್ ಡಿಕ್ಕಿಹೊಡೆದು ದುರ್ಘಟನೆ ನಡೆದಿತ್ತು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.