×
Ad

ಬೈಂದೂರು: ಪ್ರತ್ಯೇಕ ಪ್ರಕರಣ; ಇಬ್ಬರು ನಾಪತ್ತೆ

Update: 2020-03-05 22:17 IST

ಬೈಂದೂರು, ಮಾ.5: ತೆರೆದಾಳದಲ್ಲಿ ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡುತಿದ್ದ ವೀರಭದ್ರ (34) ಎಂಬವರು ನಾಪತ್ತೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ: 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ.

ಬೈಂದೂರು: ಸುಮಿತ್ರ (19) ಎಂಬವರು ತನ್ನ ತಂಗಿಯ ಗಂಡನ ಮನೆಯಾದ ಉಳ್ಳೂರಿಗೆ ಹೋಗುವುದಾಗಿ ಹೇಳಿ ಹೋದವರು ಈವರೆಗೂ ಮನೆಗೂ ಬಾರದೇ, ತಂಗಿಯ ಅಥವಾ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ: 5 ಅಡಿ ಎತ್ತರ, ಸಾದಾರಣ ಶರೀರ,ಎಣ್ಣೆಕಪ್ಪುಮೈಬಣ್ಣಹೊಂದಿದ್ದು,ಕನ್ನಡಾಷೆ ಬಲ್ಲವರಾಗಿದ್ದಾರೆ. ಇವರಿಬ್ಬರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ದೂ.ಸಂಖ್ಯೆ: 08254-251033, ಬೈಂದೂರು ವೃತ್ತ ಪೊಲೀಸ್ ನಿರೀಕ್ಷಕರು ದೂ. ಸಂಖ್ಯೆ: 08254-251031ಗೆ ಮಾಹಿತಿ ನೀಡುವಂತೆ ಬೈಂದೂರು ಪೊಲೀಸ್ ಠಾಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News