ಲಕ್ಷದ್ವೀಪಕ್ಕೆ ಅಕ್ರಮ ಪೆಟ್ರೋಲ್ ಸಾಗಾಟ: ಐವರ ಬಂಧನ

Update: 2020-03-05 16:57 GMT

ಮಂಗಳೂರು, ಮಾ.5: ಲಕ್ಷದ್ವೀಪಕ್ಕೆ ಅಕ್ರಮವಾಗಿ ಪೆಟ್ರೋಲ್ ಸಾಗಿಸಲು ಯತ್ನಿಸಿದ್ದ ಐವರನ್ನು ನಗರದ ಕೇಂದ್ರ ಉಪ ವಿಭಾಗದ ಎಸಿಪಿ ಜಗದೀಶ್ ನೇತೃತ್ವದ ತಂಡದ ಪೊಲೀಸರು ಪತ್ತೆ ಹಚ್ಚಿದ್ದು, 200 ಲೀ. ಪೆಟ್ರೋಲ್ ವಶ ಪಡಿಸಿಕೊಂಡಿದ್ದಾರೆ.

ಹಳೆ ಬಂದರು ಧಕ್ಕೆಯಲ್ಲಿ ಸಂಜೆ ಹೊತ್ತು ವಿಶೇಷ ತಪಾಸಣೆ ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಲೈಸನ್ಸ್ ಇಲ್ಲದೆ 200 ಲೀ. ಪೆಟ್ರೋಲನ್ನು ಕ್ಯಾನ್‌ನಲ್ಲಿ ತುಂಬಿಸಿ ಸಾಗಿಸಲು ಯತ್ನಿಸಲಾಗಿತ್ತು ಎಂದು ತಿಳಿದುಬಂದಿದೆ. ಆರೋಪಿಗಳ ವಿವರ ಲಭ್ಯವಾಗಿಲ್ಲ. ಪಾಂಡೇಶ್ವರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News