×
Ad

ಮಂಗಳೂರು: ರಂಗನಟ ಜಗನ್ನಾಥರಿಗೆ ಅಭಿನಂದನಾ ಕಾರ್ಯಕ್ರಮ

Update: 2020-03-05 22:54 IST

ಮಂಗಳೂರು, ಮಾ.5: ಭಾರತೀಯ ಭವಿಷ್ಯ ನಿಧಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಹಾಗೂ ಹಿರಿಯ ರಂಗಭೂಮಿ ನಟ ಜಗನ್ನಾಥ ಕೆ.(ಜಗ್ಗಣ್ಣ) ಅವರ 60ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ ನಗರದ ಕುಲಶೇಖರದಲ್ಲಿರುವ ಹವ್ಯಾಸಿ ಭಾಗವತ, ರಂಗನಟ ಸುಧಾಕರ್ ಸಾಲಿಯಾನ್‌ರ ನಿವಾಸದಲ್ಲಿ ನಡೆಯಿತು.

ಸುಧಾಕರ್‌ರ ಮಾತೃಶ್ರೀ ನಳಿನಿ ಕಾರ್ಯಕ್ರಮ ಉದ್ಘಾಟಿಸಿತು. ಈ ಸಂದರ್ಭ 60 ತುಂಬಿದ ಜಗ್ಗಣ್ಣ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಹಿರಿಯ ರಂಗಭೂಮಿ ಕಲಾವಿದ ಲಕ್ಷ್ಮ್ಮಣ ಕುಮಾರ್ ಮಲ್ಲೂರು, ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ, ಹಿರಿಯ ರಂಗ ನಟ ಮ್ಯಾಕ್ಸಿಂ ರೋಡ್ರಿಗಸ್, ರಂಗಭೂಷಣದ ಸಂಚಾಲಕ ಶಶಿಭೂಷಣ್ ಕಿಣಿ, ಹವ್ಯಾಸಿ ಯಕ್ಷಗಾನ ಕಲಾವಿದ ಪುಷ್ಪರಾಜ ಕುಕ್ಕಾಜೆ, ಲಕ್ಷ್ಮಿಸುಧಾಕರ್ ಉಪಸ್ಥಿತರಿದ್ದರು.

ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪುತ್ರಿ ಭೂಮಿ ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News