×
Ad

ಮಂಗಳೂರು: ಮಾ.6ರಿಂದ ಬೆಂಗಳೂರು-ಮಣಿಪಾಲ ವೋಲ್ವೋ ಬಸ್ ಪ್ರಾರಂಭ

Update: 2020-03-05 23:00 IST

ಮಂಗಳೂರು, ಮಾ. 5: ಬೆಂಗಳೂರಿನಿಂದ ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ಹಾಗೂ ಮಣಿಪಾಲದಿಂದ ಅದೇ ಮಾರ್ಗವಾಗಿ ಬೆಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಕ್ಲಬ್‌ಕ್ಲಾಸ್ ಮಲ್ಟಿಆಕ್ಸ್‌ಲ್ ವೋಲ್ವೋ ಬಸ್ ಸಾರಿಗೆಯನ್ನು ಕೆಎಸ್ಸಾರ್ಟಿಸಿ ಮಾ.6ರಿಂದ ಬೆಂಗಳೂರಿನಿಂದ ಪ್ರಾರಂಭಿಸಲಿದೆ.

ಈ ಬಸ್ ಬೆಂಗಳೂರು ಬಸ್ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟು ಮಂಗಳೂರಿಗೆ ಬೆಳಗ್ಗೆ 4:15ಕ್ಕೆ, ಉಡುಪಿಗೆ 5:15ಕ್ಕೆ,ಮಣಿಪಾಲಕ್ಕೆ 5:30ಕ್ಕೆ ತಲುಪಲಿದೆ. ಮರು ಪ್ರಯಾಣದಲ್ಲಿ ಮಣಿಪಾಲದಿಂದ ಅಪರಾಹ್ನ 3:30ಕ್ಕೆ ಹೊರಟು ಮಂಗಳೂರಿಗೆ ಸಂಜೆ 5ಕ್ಕೆ ಬಂದು ರಾತ್ರಿ 1ಕ್ಕೆ ಬೆಂಗಳೂರು ತಲುಪಲಿದೆ.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆಯಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News