ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಬೆಳ್ಳಿಯ ಆಭರಣಗಳ ಪ್ರದರ್ಶನಕ್ಕೆ ಚಾಲನೆ
ಉಡುಪಿ, ಮಾ.6: ಪ್ರತಿಷ್ಠಿತ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿಯ ಶೋರೂಂನಲ್ಲಿ ಮಾ.22ರವರೆಗೆ ನಡೆಯಲಿರುವ ವಿನೂತನ ಬೆಳ್ಳಿಯ ಆಭರಣಗಳು ಮತ್ತು ಇತರ ಉತ್ಪನ್ನಗಳ ಪ್ರದಶನಕ್ಕೆ ಇಂದು ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಂಜಿತಾ ದೀಪಕ್, ವಿದ್ಯಾ ರಮೇಶ್ ಹಾಗೂ ಕೀರ್ತಿಶ್ರೀ ಈ ಪ್ರದರ್ಶನವನ್ನು ಉದ್ಘಾಟಿಸಿದರು. ಉಡುಪಿ ಶೋರೂಂ ಮುಖ್ಯಸ್ಥ ಹಫೀಝ್ ರಹ್ಮಾನ್ ಮತ್ತು ಆಡಳಿತ ಸದಸ್ಯರು ಉಪಸ್ಥಿತರಿದ್ದರು. ಗೆಸ್ಟ್ ರಿಲೇಶನ್ ಮ್ಯಾನೇಜರ್ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.
ಈ ಪ್ರದರ್ಶನದ ಪ್ರಯುಕ್ತ ಪ್ರತಿ 5000 ರೂ. ಮೌಲ್ಯದ ಬೆಳ್ಳಿ ಆಭರಣವನ್ನು ಖರೀದಿಸಿದ ಗ್ರಾಹಕರಿಗೆ 500 ರೂ. ಮೌಲ್ಯದ ಬೆಳ್ಳಿ ಆಭರಣವನ್ನು ಉಚಿತ ವಾಗಿ ನೀಡಲಿದೆ.
ಮಲಬಾರ್ ಗೋಲ್ಡ್ ಡೈಮಂಡ್ಸ್ 10 ದೇಶಗಳಲ್ಲಿ 260ಕ್ಕೂ ಹೆಚ್ಚಿನ ಮಳಿಗೆ ಗಳನ್ನು ಹೊಂದಿದೆ. ಮಲಬಾರ್ ಗೋಲ್ಡ್ ಡೈಮಂಡ್ಸ್ ಉಪ ಬ್ರಾಂಡ್‌ಗಳಾದ ಮೈನ್- ವಜ್ರಾಭರಣಗಳು, ಎರಾ - ಅನ್ಕಟ್ ವಜ್ರಾಭರಣಗಳು, ಡಿವೈನ್ - ಭಾರತೀಯ ಪಾರಂಪರಿಕ ಆಭರಣಗಳು , ಎತಿನಿಕ್ಸ್ - ಕರಕುಶಲ ವಿನ್ಯಾಸಿತ ಆಭರಣಗಳು, ಪ್ರಶಿಯಾ -ಅಮೂಲ್ಯ ರತ್ನಾಭರಣಗಳು, ಸ್ಟಾರ್ಲೆಟ್- ಮಕ್ಕಳ ಆಭರಣಗಳು ಇವೆಲ್ಲದರ ಆಯ್ದ ಸಂಗ್ರಹಗಳನ್ನು ಶೋೂಂಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ತನ್ನ ಎಲ್ಲಾ ಆಭರಣಗಳಿಗೆ ಜೀವನಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷ ಉಚಿತ ವಿಮೆ ಸಂರಕ್ಷಣೆ, ಪಾರದರ್ಶಕ ಮತ್ತು ವಿವರವಾದ ದರದ ಪಟ್ಟಿ ಹಾಗು ಬೈಬ್ಯಾಕ್ ಗ್ಯಾರೆಂಟಿಯನ್ನು ನೀಡುತ್ತದೆ.