ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
Update: 2020-03-06 20:06 IST
ಉಡುಪಿ, ಮಾ.6: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ರಾಜ್ಯ ಸಮಿತಿ ಸದಸ್ಯ ಹಾಜಿ ಪಿ.ಅಬೂಬಕ್ಕರ್ ನೇಜಾರು ಇತ್ತೀಚೆಗೆ ಚಾಲನೆ ನೀಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಹಾಜಿ ಎಂ.ಎಸ್.ರಝಾಕ್, ಜಿಲ್ಲಾ ಉಪಾಧ್ಯಕ್ಷರಾದ ಶೇಖ್ ಮುಹಮ್ಮದ್ ನಯೀಮ್, ಬಿ.ಎಸ್.ಎಫ್. ರಫೀಕ್, ಸರ್ದಾರ್ ಗುಲ್ವಾಡಿ, ಮುಹಮ್ಮದ್ ಗೌಸ್ ನಾಯಕರಾದ ಸಯ್ಯಿದ್ ಫರೀದ್, ಅಡ್ವಕೆಟ್ ಇಲ್ಯಾಸ್, ನಾಸಿರ್ ಇಂಜಿನಿಯರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು. ಸುಬ್ಹಾನ್ ಅಹ್ಮದ್ ಹೊನ್ನಾಳ ವಂದಿಸಿದರು. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು.