×
Ad

ಮಾ.7 ರಂದು ಹಫೀಝೆ ಕುರ್ ಆನ್ ಪದವಿ ಪ್ರದಾನ

Update: 2020-03-06 20:10 IST

ಉಡುಪಿ, ಮಾ.6: ಶಿರ್ವ ಫೈಝುಲ್ ಇಸ್ಲಾಮ್ ಮದ್ರಸದ ಹುಪ್ಫಝ್ ಓ ಅಝಮ್ ಇದರ ವಿದ್ಯಾರ್ಥಿಗಳ ದಸ್ತರ್ ಬಂದಿ ಹಫೀಝೆ ಕುರ್ ಆನ್ ಪದವಿ ಪ್ರದಾನ ಸಮಾರಂಭವು ಮಾ.7 ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.

ಬೆಂಗಳೂರು ಉಮರ್ ಫಾರೂಕ್ ಮಸೀದಿಯ ಖತೀಬ್ ಮೌಲಾನ ಪಿ.ಎಂ.ಮುಜಮ್ಮಿಲ್ ಸಾಹೇಬ್ ರಶದಿ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಇಂದ್ರಾಳಿ ಜುಮಾ ಮಸೀದಿಯ ಖತೀಬ್ ಮೌಲಾನ ಮಸೀವುಲ್ಲಾ ಖಾನ್ ಖಸ್ಮಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News