ಮಾ.13ರಿಂದ ಕಟಪಾಡಿ ದರ್ಗಾ ಉರೂಸ್
Update: 2020-03-06 20:12 IST
ಕಾಪು, ಮಾ.6: ಕಟಪಾಡಿ ಅಶೈಖ್ ಫಕೀರ್ ಶಾಹ್ ವಲಿಯುಲ್ಲಾಹ್ ದರ್ಗಾದ ಉರೂಸ್ ಸಮಾರಂಭ ಮಾ.13ರಿಂದ 15ರವರೆಗೆ ನಡೆಯಲಿದೆ.
ಮಾ.13ರ ಜುಮಾ ನಮಾಝಿನ ಬಳಿಕ ಧ್ವಜಾರೋಹಣದ ನೆರವೇರಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಲಾಗುವುದು. ಮಾ.14ರ ಮಗ್ರಿಬ್ ನಮಾಝಿನ ಬಳಿಕ ಸಂದಲ್ ಮೆರವಣಿಗೆ ನಡೆಯಲಿದೆ. ಮಾ.15ರಂದು ಬೆಳಗ್ಗೆ ಮೌಲೂದ್ ಪಾರಾಯಣ ಜರುಗಲಿದ್ದು, ನಂತರ ಅನ್ನದಾನ ಕಾರ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.