×
Ad

ಪಾಂಗಾಳ: 14 ಕುಟುಂಬಗಳಿಗೆ ಸಹಾಯಧನ ವಿತರಣೆ

Update: 2020-03-06 20:15 IST

 ಕಾಪು, ಮಾ.6: ಪಾಂಗಾಳ ಆರ್ಯಾಡಿ ದಿ.ಸುಂದರ ಅಂಚನ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ದಿ.ಸುಂದರ ಅಂಚನ್ ಅವರ 4ನೆ ವರ್ಷದ ಸಂಸ್ಮರಣಾರ್ಥ ವಾಗಿ ಅನಾರೋಗ್ಯ ಪೀಡಿತ, ಕಡು ಬಡತನ, ವಿಕಲಚೇತನ, ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕಾಗಿ 14 ಕುಟುಂಬಗಳಿಗೆ ಸುಮಾರು 1.50 ಲಕ್ಷ ರೂ. ಸಹಾಯ ಧನವ್ನು ಮಂಗಳವಾರ ವಿತರಿಸಲಾಯಿತು.

ಪಾಂಗಾಳ ಆರ್ಯಾಡಿಯ ಅಂಚನ್ಸ್‌ನಲ್ಲಿ ಪತ್ನಿ ಜಾನಕಿ ಸುಂದರ ಅಂಚನ್, ಮಕ್ಕಳಾದ ಸುರೇಂದ್ರ ಅಂಚನ್, ಸುಜಿತ್ ಅಂಚನ್, ಸುಕುಮಾರ್ ಅಂಚನ್, ಫಲಾನುಭವಿಗಳಿಗೆ ಸಹಾಯಧನದ ಚೆಕ್‌ನ್ನು ಹಸ್ತಾಂತರಿಸಿದರು.

ಈ ಸಂದರ್ಭ ಈ ಸಂದರ್ಭ ಜಿಪಂ ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ದಿವ್ಯಾ ಸುರೇಂದ್ರ, ಕೃಪಾ ಸುಜಿತ್, ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರಾ ಡಳಿತ ಮಂಡಳಿಯ ಸದಸ್ಯ ಕಾಮ್‌ರಾಜ್ ಸುವರ್ಣ, ಮಹೇಶ ಎಂ.ಸುವರ್ಣ, ತಾಪಂ ಸದಸ್ಯ ರಾಜೇಶ್ ಶೆಟ್ಟಿ, ಗ್ರಾಪಂ ಸದಸ್ಯರು ಗಳಾದ ಶೇಖರ್ ಪೂಜಾರಿ, ಸುಜಾತ ಭಂಡಾರಿ, ಪ್ರಮೀಳಾ ಸೋನ್ಸ್, ನತಾಲಿಯಾ ಮಾರ್ಟಿಸ್, ಬಿಜೆಪಿ ಕಾಪು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಉದಯ ಸೋನ್ಸ್  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News