×
Ad

ಮಾ.7ರಂದು ಪಿಪಿಸಿಯಲ್ಲಿ ‘ಯೋಧ- 2020’

Update: 2020-03-06 20:19 IST

ಉಡುಪಿ, ಮಾ.6: ಉಡುಪಿ ಜಿಲ್ಲೆ ಹಾಗೂ ಶೃಂಗೇರಿ ತಾಲೂಕುಗಳ ಅಂತರಕಾಲೇಜು ಮಟ್ಟದ ಎನ್‌ಸಿಸಿವಿದ್ಯಾರ್ಥಿಗಳ ವಿವಿಧ ಸ್ಪರ್ಧೆ ‘ಯೋಧ- 2020’ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶನಿವಾರ ನಡೆಯಲಿದೆ.

ಸ್ಪರ್ಧೆಯನ್ನುಬೆಳಗ್ಗೆ 9  ಗಂಟೆಗೆ ಕರ್ನಲ್ ನಂದಕಿಶೋರ್ ಉದ್ಘಾಟಿಸಲಿದ್ದು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ಎನ್. ವಿಜಯ ಬಲ್ಲಾಳ್, ಲೆಫ್ಟಿನೆಂಟ್ ಕರ್ನಲ್ ಪರ್ಮಿಂದರ್ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 3:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ನಿತ್ಯಾನಂದ ವಿವೇಕವಂಶಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ.ಪ್ರಕಾಶ್ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News