ಕೇಂದ್ರ ಸರಕಾರದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಭಡ್ತಿಯಲ್ಲಿ ಶೇ. 50 ಇಳಿಕೆ!

Update: 2020-03-06 16:27 GMT

ಹೊಸದಿಲ್ಲಿ, ಮಾ.6: ಕೇಂದ್ರ ಸರಕಾರದಲ್ಲಿ ಐಎಎಸ್, ಐಪಿಎಸ್, ಐಆರ್‌ಎಸ್‌ನಿಂದ ಎ ಗುಂಪಿನ ಅಧಿಕಾರಿ ಹುದ್ದೆಗೆ ಭಡ್ತಿಯಲ್ಲಿ 2016 ಹಾಗೂ 2018ರ ನಡುವೆ ಶೇ. 50ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಲೋಕಸಭೆಯಲ್ಲಿ ಬುಧವಾರ ಕೇಳಿದ ಪ್ರಶ್ನೆಯೊಂದಕ್ಕೆ ಈ ಉತ್ತರ ನೀಡಲಾಗಿದೆ.

2018ರಲ್ಲಿ ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಮಟ್ಟಕ್ಕೆ 2018ರಲ್ಲಿ 2,918 ಭಡ್ತಿ ನೀಡಲಾಗಿದೆ. ಈ ಸಂಖ್ಯೆ 2016 ಹಾಗೂ 2017ರಲ್ಲಿ ಕ್ರಮವಾಗಿ 5,953 ಹಾಗೂ 5,944 ಎಂದು ಕೇಂದ್ರದ ಸಹಾಯಕ ಸಚಿವ ಜೆತೇಂದ್ರ ಸಿಂಗ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಐಎಎಸ್, ಐಪಿಎಸ್ ಹಾಗೂ ಇತರ ಶ್ರೇಣಿಯಿಂದ ಭಡ್ತಿ ಮೂಲಕ ಗ್ರೂಪ್ ಎ ಅಧಿಕಾರಿಗಳ ಹುದ್ದೆಗಳಿಗೆ ಕೇಂದ್ರ ಸರಕಾರ ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸುತ್ತದೆ. ಅಲ್ಲದೆ ನೇರ ನೇಮಕಾತಿ ಮೂಲಕ ಕೂಡ ನಿಯೋಜಿಸುತ್ತದೆ. ಉಪ ಕಾರ್ಯದರ್ಶಿಯಿಂದ ಆರಂಭವಾಗಿ ಕಾರ್ಯದರ್ಶಿ ವರೆಗಿನ ಈ ಮೇಲೆ ಉಲ್ಲೇಖಿಸಲಾದ ಎಲ್ಲ ಹುದ್ದೆಗಳಿಗೆ ಅಧಿಕಾರಿಗಳನ್ನು ಭಡ್ತಿ ಮೂಲಕ ನಿಯೋಜಿಸಲಾಗುತ್ತದೆ.

 ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣ, ಕಡಿಮೆ ನೇಮಕಾತಿ ಮೊದಲಾದ ಕಾರಣಗಳು ಇದಕ್ಕೆ ಕಾರಣ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದು ಶೇ. 50ಕ್ಕಿಂತಲೂ ಹೆಚ್ಚು ಇಳಿಕೆಯಾಗಿರುವುದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಇದಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಭಡ್ತಿಯಲ್ಲಿ ಕೂಡ 2016ರಿಂದ ತೀವ್ರ ಇಳಿಕೆಯಾಗಿದೆ. 2016ರಲ್ಲಿ ಈ ಹುದ್ದೆಗಳಿಗೆ ಭಡ್ತಿಯ ಮೂಲಕ 864 ಪರಿಶಿಷ್ಟ ಜಾತಿ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆದರೆ, 2018ರಲ್ಲಿ ಶೇ. 57ಕ್ಕೆ ಅಂದರೆ 373ಕ್ಕೆ ಇಳಿಕೆಯಾಗಿತ್ತು. ಪರಿಶಿಷ್ಟ ಪಂಗಡದಲ್ಲಿ 2016ರಲ್ಲಿ ಭಡ್ತಿ ಮೂಲಕ 377 ಮಂದಿಯನ್ನು ನಿಯೋಜಿಸಲಾಗಿದೆ. ಇದು 2018ರಲ್ಲಿ ಶೇ. 58ಕ್ಕೆ ಅಂದರೆ 157ಕ್ಕೆ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News