ಪರ್ಕಳ: ಮಾ.8ರಂದು ಉಚಿತ ಆರೋಗ್ಯ ತಪಾಸಣೆ

Update: 2020-03-06 16:27 GMT

ಪರ್ಕಳ, ಮಾ.6: ರೋಟರಿ ಕ್ಲಬ್ ಪರ್ಕಳ, ಬಿ ಎಂ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಕ್ಲಬ್ ಹಾಗು ಸಮುದಾಯ ವೈದ್ಯಕೀಯ ವಿಭಾಗ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಪರ್ಕಳ ಬಿ. ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾ.8ರ ಬೆಳಗ್ಗೆ 9 ರಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಾಸಣಾ ಶಿಬಿರವನ್ನು ಆಯೋಜಿಸ ಲಾಗಿದೆ.

ಈ ಶಿಬಿರದಲ್ಲಿ ಮಧುಮೇಹ, ದಂತ ವಿಭಾಗ, ರಕ್ತದೊತ್ತಡ, ನೇತ್ರ ತಪಾಸಣೆ, ಇಸಿಜಿ ಮುಂತಾದ ತಪಾಸಣೆಗಳನ್ನು ನಡೆಸಲಾಗುವುದು ಹಾಗು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9945227132, 9964237476ನ್ನು ಸಂಪರ್ಕಿಸುವಂತೆ ರೋಟರಿ ಪರ್ಕಳ ಇದರ ಅಧ್ಯಕ್ಷ ದಯಾನಂದ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News