ಮಾ.10ರಂದು ಪುನಶ್ಚೇತನ ಅರಿವು ಕಾರ್ಯಾಗಾರ
ಉಡುಪಿ, ಮಾ.6: ಜಿಲ್ಲಾಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಉಡುಪಿ ಮತ್ತು ಯೂತ್ ಫಾರ್ ಜಾಬ್ಸ್ ಮಂಗಳೂರು ಇವರ ವತಿಯಿಂದ ಉಡುಪಿ ಜಿಲ್ಲೆಯ ಕಾರ್ಪೊರೇಟ್ ಉದ್ಯೋಗದಾತರಿಗೆ ಅಂಗವಿಕಲತೆ-ಉದ್ಯೋಗ ಮತ್ತು ಪುನಶ್ಚೇತನ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವು ಮಾ.10ರಂದು ಅಪರಾಹ್ನ 2:45ರಿಂದ 5 ಗಂಟೆಯವರೆಗೆ ಮಣಿಪಾಲ ಅಲೆವೂರು ರಸ್ತೆಯ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಭವನದಲ್ಲಿ ನಡೆಯಲಿದೆ.
ಜಿಲ್ಲೆಯ ಕಾರ್ಪೊರೇಟ್ ಸಂಸ್ಥೆಗಳು ಅಂಗವಿಕಲರಿಗೆ ಉದ್ಯೋಗಾವಕಾಶ ನೀಡಬಹುದಾದಲ್ಲಿ ಕಂಪನಿಗೆ ಬರುವಂತಹ ಲಾಭಗಳುಮತ್ತು ಅಂಗವಿಕಲರಿಗೆ ಹೇಗೆ ಕೆಲಸ ಮಾಡಿಸುವುದು ಎಂಬ ಚರ್ಚೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ರಜತಾದ್ರಿ, ಮಣಿಪಾಲ, ದೂ.ಸಂಖ್ಯೆ: 0820-2574810 / 811 ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಸಬಲೀಕಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.