ಅಕ್ರಮ ಮರಳು ಸಾಗಾಟ: ಟಿಪ್ಪರ್ ಚಾಲಕ ಬಂಧನ
Update: 2020-03-06 22:31 IST
ಶಿರ್ವ, ಮಾ.6: ಹೇರೂರು ಗ್ರಾಮದ ಕಲ್ಲುಗುಡ್ಡೆ ಕುದುರೆಕಟ್ಟೆ ಎಂಬಲ್ಲಿರುವ ಹೊಳೆಯಿಂದ ಫೆ.6ರಂದು ಬೆಳಗಿನ ಜಾವ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಚಾಲಕ ಸಹಿತವಾಗಿ ಶಿರ್ವ ಪೊಲೀಸರು ಹೇರೂರು ಗ್ರಾಮದ ಗರಡಿ ಬಳಿ ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಟಿಪ್ಪರ್ ಚಾಲಕ ಮಲ್ಲಾರ್ ನಿವಾಸಿ ಹಂಝ(32) ಎಂದು ಗುರುತಿಸಲಾಗಿದೆ. ಪೊಲೀಸ್ ದಾಳಿ ವೇಳೆ ಟಿಪ್ಪರ್ ಮಾಲಕ ಯೊಗೀಶ್ ಪರಾರಿಯಾಗಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.