ಮಂಗಳೂರು: ರಾಜ್ಯಮಟ್ಟದ ಪತ್ರಕರ್ತರ 35ನೆ ಸಮ್ಮೇಳನಕ್ಕೆ ಚಾಲನೆ
Update: 2020-03-07 11:13 IST
ಮಂಗಳೂರು: ರಾಜ್ಯಮಟ್ಟದ ಸಮ್ಮೇಳನವು ಅಭಿನವ ಮಂಗಳೂರು ಲೋಕೇಶ್ ಸಂಪಿಗೆ ಬಳಗದ ವಾದ್ಯವೈವಿಧ್ಯದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆರಂಭಗೊಂಡಿದೆ.
2 ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ 1800 ಕ್ಕೂಅಧಿಕ ಮಂದಿ ನೋಂದಾಯಿಸಿಕೊಂಡಿದ್ದು, ಬಹುತೇಕರು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ. ನಗರದ ಮಿನಿ ವಿಧಾನಸೌಧದ ಬಳಿಯ ತಾಲೂಕು ಪಂಚಾಯತ್‌ನ ನೂತನ ಕಟ್ಟಡದಲ್ಲಿ ಪತ್ರಕರ್ತರ ನೋಂದಣಿ ನಡೆಯುತ್ತಿದೆ. ಸಮ್ಮೇಳನವು ಪುರಭವನದ ದಿ. ವಡ್ಜಸೆರ್ ರಘುರಾಮ ಶೆಟ್ಟಿ ವೇದಿಕೆಯಲ್ಲಿ ನಡೆಯುತ್ತಿದೆ.