×
Ad

ನೂರುಲ್ ಹುದಾ ದುಬೈ ಸಮಿತಿಯ 3ನೇ ವಾರ್ಷಿಕ ಸಭೆ: ಪದಾಧಿಕಾರಿಗಳ ಆಯ್ಕೆ

Update: 2020-03-07 12:07 IST

ದುಬೈ : ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಯುಎಇ ಸಮಿತಿಯ ತೃತೀಯ ವಾರ್ಷಿಕ ಸಭೆಯು ದುಬೈ ಸಮಿತಿಯ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ ಅಧ್ಯಕ್ಷತೆಯಲ್ಲಿ ದೇರಾ ಒರಿಯಂಟಲ್ ಕಾರ್ನರ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ನೂರುಲ್ ಹುದಾ ದುಬೈ ಸಮಿತಿಯ ಧಾರ್ಮಿಕ ಸಲಹೆಗಾರ ಹಮೀದ್ ಉಸ್ತಾದರ ದುವಾದೊಂದಿಗೆ ಆರಂಭವಾದ ಸಭೆಯಲ್ಲಿ  ಕಾರ್ಯನಿರ್ವಾಹಕ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂರುಲ್ ಹುದಾ ಯುಎಇ ಸಮಿತಿಯ ಸಲಹೆಗಾರ ನೌಶಾದ್ ಫೈಝಿ ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ ವರದಿ ವಾಚಿಸಿದರು, ರಿಫಾಯಿ ಗೂನಡ್ಕ ಲೆಕ್ಕ ಪತ್ರ ಮಂಡಿಸಿದರು.

ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಚುಣಾವಣಾ ಅಧಿಕಾರಿಯಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ನೂರುಲ್ ಹುದಾ ದುಬೈ ಸಮಿತಿಯ 2020-21ನೇ ಸಾಲಿನ ಪದಾಧಿಕಾರಿಗಳ ವಿವರ:

ಗೌರವ ಸಲಹೆಗಾರರು: ಶರೀಫ್ ಕಾವು, ಅಬ್ದುಲ್ ಲತೀಫ್ ಕೌಡಿಚ್ಚಾರ್, ಅಬ್ದುಲ್ ಸಲಾಮ್ ಬಪ್ಪಳಿಗೆ, ನೂರ್ ಮುಹಮ್ಮದ್ ನೀರ್ಕಜೆ, ಅಶ್ರಫ್ ಶಾ ಮಾಂತೂರು, ಸಲೀಂ ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್, ಮುಹಮ್ಮದ್ ರಫೀಕ್ ಆತೂರು. ಗೌರವಾಧ್ಯಕ್ಷರು : ಸುಲೈಮಾನ್ ಮೌಲವಿ ಕಲ್ಲೆಗ, ಅಧ್ಯಕ್ಷರು : ಅನ್ವರ್ ಮಾಣಿಲ, ಕಾರ್ಯಾಧ್ಯಕ್ಷರು: ಅಝೀಝ್ ಸೋಂಪಾಡಿ, ಪ್ರಧಾನ ಕಾರ್ಯದರ್ಶಿ : ಇಸ್ಮಾಯಿಲ್ ತಿಂಗಳಾಡಿ, ಕೋಶಾಧಿಕಾರಿ : ಉಸ್ಮಾನ್ ಕೆಮ್ಮಿಂಜೆ, ಉಪಾಧ್ಯಕ್ಷರು : ಯೂಸುಫ್ ಈಶ್ವರಮಂಗಳ, ಮುಹಮ್ಮದ್ ಪಳ್ಳತ್ತೂರು, ಉಸ್ಮಾನ್ ಮರೀಲ್, ಅಶ್ರಫ್ ಎಂ ಎ ದೇಲಂಪಾಡಿ, ಕಾರ್ಯನಿರ್ವಾಹಕ ಕಾರ್ಯದರ್ಶಿ: ಹೈದರ್ ಅಲಿ ಈಶ್ವರಮಂಗಲ, ಕಾರ್ಯದರ್ಶಿಗಳು : ಆಸಿಫ್ ಮರೀಲ್, ಸಿದ್ದೀಕ್ ಸುಳ್ಯ, ಲತೀಫ್ ಆರ್ತಿಕೆರೆ, ತಾಜುದ್ದೀನ್ ಕೊಚ್ಚಿ, ಸಂಘಟನಾ ಕಾರ್ಯದರ್ಶಿ : ಶಂಸುದ್ದೀನ್ ಇಂದುಮೂಲೆ, ಅಶ್ರಫ್ ಸಿ ಎ ದೇಲಂಪಾಡಿ, ಮೂಸ ಕುಂಞಿ ಕಾವು, ಲೆಕ್ಕ  ಪರಿಶೋಧಕರು: ಅಶ್ರಫ್ ಪರ್ಲಡ್ಕ, ರಿಫಾಯಿ ಗೂನಡ್ಕ, ಸಂಚಾಲಕರು: ಅಶ್ರಫ್ ಆರ್ತಿಕೆರೆ, ಅಬ್ಬಾಸ್ ಕೇಕುಡೆ, ಅಬ್ದುಲ್ ಖಾದರ್ ಹಾಜಿ ಸಂಪ್ಯ, ಶರೀಫ್ ಕಟ್ಟತ್ತಾರ್, ನವಾಝ್ ಬಿಸಿ ರೋಡ್, ಬಶೀರ್ ಕೆಮ್ಮಿಂಜೆ, ಆಸಿಫ್ ಸಿಬಾರ, ಜಾಬಿರ್ ಬಪ್ಪಳಿಗೆ, ಇಬ್ರಾಹಿಮ್ ಆತೂರು, ಅಲೀ ಮಲಪ್ಪುರ, ಶಂಸೀರ್ ಅಡ್ಡೂರು, ಝೈನುದ್ದೀನ್ ಎಸ್ ಎಮ್ ಮಾಂತೂರು, ರಫೀಕ್ ಕೊಡಗು, ಇಕ್ಬಾಲ್ ಅರ್ಶದಿ, ಅಬ್ದುಲ್ ರಹಿಮಾನ್ ಪೆರಾಜೆ, ಸಿದ್ದೀಕ್ ಅಡ್ಡೂರು, ಇಫ್ತಿಕಾರ್ ಕಣ್ಣೂರು, ಶಬೀರ್ ಪಡುಬಿದ್ರೆ, ನಾಸಿರ್ ಬಪ್ಪಳಿಗೆ, ಶಾಹುಲ್ ಬಿಸಿ ರೋಡ್, ಝಕರಿಯ ಮುಲಾರ್, ಇಸಾಕ್ ಕುಡ್ತಮುಗೇರು, ಮುಹಮ್ಮದ್ ಪೈವಲಿಕೆ, ಮುನೀರ್ ಸಾಲ್ಮರ, ಜಲೀಲ್ ಉಕ್ಕುಡ, ಜಲೀಲ್ ವಿಟ್ಲ, ಅಲಿ ಮಣಿಲ, ಹಸೈನಾರ್ ದುಗ್ಗುಲಡ್ಕ, ಧಾರ್ಮಿಕ ಸಲಹೆಗಾರರು: ಹಮೀದ್ ಮುಸ್ಲಿಯಾರ್ ಅನ್ಸಾರ್ ಹುದವಿ, ಹುಸೈನ್ ಫೈಝಿ ಕೊಡಗು. ಮಾಧ್ಯಮ ಸಂಯೋಜಕರು: ಅಬೂಬಕ್ಕರ್ ಮುಂಡೋಳೆ, ಜಾಬಿರ್ ಬೆಟ್ಟಂಪಾಡಿ, ನವಾಝ್ ಕಟ್ಟತ್ತಾರ್, ಸಿದ್ದೀಕ್ ಈಶ್ವರಮಂಗಳ.

ಕಾರ್ಯಕಾರಿ ಸಮಿತಿ ಸದಸ್ಯರು : ಆಸಿಫ್ ಮಾಡನ್ನೂರು, ಮೊಯಿದೀನ್ ದೇಲಂಪಾಡಿ, ಅನ್ಸಾಫ್ ಪಾತೂರು, ಅಬೂಬಕ್ಕರ್ ಬಜಾಲ್, ಉಮ್ಮರ್ ಮಾಣಿ, ರಫೀಕ್ ಮುಕ್ವೆ, ರಫೀಕ್ ಸಾಲ್ಮರ, ಸಯೀದ್ ಪುರುಷರಕಟ್ಟೆ, ಅಝರ್ ಹಂಡೇಲು, ನಿಝಾಮ್ ತೋಡಾರು, ಬಾತಿಷ ಪರ್ಲಡ್ಕ, ಮಜೀದ್ ಮುಕ್ರಂಪಾಡಿ, ಅಬ್ದುಲ್ ಬಾರಿ ಕೊಳ್ತಿಗೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಶಾರ್ಜಾ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಳಿಮುಕ, ನೈಫ್ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಸಲಾಮ್ ಬಪ್ಪಲಿಗೆ, ಕಿಸೈಸ್ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸಂಪ್ಯ, ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಇಂದುಮೂಲೆ, ಕೋಶಾಧಿಕಾರಿ ಲತೀಫ್ ಆರ್ತಿಗೆರೆ, ಬರ್ ದುಬೈ ಸಮಿತಿಯ ಕೋಶಾಧಿಕಾರಿ  ಅಶ್ರಫ್ ಆರ್ತಿಗೆರೆ, ಡಿಐಪಿ ಇವಾನ್ಸ್ ಸಮಿತಿಯ ಅಧ್ಯಕ್ಷ ಅಲೀ ಮಲಪ್ಪುರ, ಪ್ರಧಾನ ಕಾರ್ಯದರ್ಶಿ ಶಬೀರ್ ಪಡುಬಿದ್ರೆ, ನಖೀಲ್ ಸಮಿತಿಯ ಅಧ್ಯಕ್ಷ ಮನೀರ್ ಸಾಲ್ಮರ, ಅಬೂಹೈಲ್ ಸಮಿತಿಯ ಕೋಶಾಧಿಕಾರಿ ಮುಹಮ್ಮದ್ ಪಳ್ಳತ್ತೂರು ಹಾಗೂ ದುಬೈ ಮತ್ತು ಕ್ಲಸ್ಟರ್ ಸಮಿತಿಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತಿಂಗಳಾಡಿ ವಂದಿಸಿದರು. ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News