ಬ್ಯಾರಿ ಅಕಾಡೆಮಿ : ಮಾ. 22ರಂದು ಸಾರ್ವಜನಿಕರಿಗಾಗಿ ಮೆಹಂದಿ ಸ್ಪರ್ಧೆ
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಾರ್ವಜನಿಕರಿಗಾಗಿ ಮೆಹಂದಿ ಸ್ಪರ್ಧೆಯನ್ನು ಮಾ. 22ರಂದು ಮಂಗಳೂರಿನಲ್ಲಿ ನಡೆಸಲಿದ್ದು, ಆಸಕ್ತರು ತಮ್ಮ ಹೆಸರನ್ನು ಮಾ. 20ರೊಳಗೆ ನೋಂದಾಯಿಸಬೇಕಾಗಿ ತಿಳಿಸಲಾಗಿದೆ.
ನಿಯಮಗಳು :-
ಸ್ಪರ್ಧೆ 2 ವಿಭಾಗಗಳಲ್ಲಿ ನಡೆಯಲಿದೆ. ಕಿರಿಯರ ವಿಬಾಗ (15ರಿಂದ 20 ವರ್ಷದೊಳಗೆ) ಮತ್ತು ಹಿರಿಯರ ವಿಭಾಗ (20 ವರ್ಷ ಮೇಲ್ಪಟ್ಟು)
2. ವಯೋಮಿತಿ ದಾಖಲಾತಿಗಾಗಿ ಗುರುತಿನ ಚೀಟಿ ನೀಡುವುದು.
3. ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವತ: ತನ್ನ ಕೈಯಲ್ಲೆ ಮೆಹಂದಿ ಬಿಡಿಸತಕ್ಕದ್ದು.
ಅಥವಾ ಒಬ್ಬ ಸಹಾಯಕರನ್ನು ಕರೆದುಕೊಂಡು ಬರಬಹುದು.
4. ಮೊದಲು ನೋಂದಾಯಿಸಿದ 100 ಮಂದಿ ಸ್ಪರ್ಧಾಳುಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಆದ್ಯತೆ.
5. ಸ್ಫರ್ಧೆಯ ವಿಜೇತರಿಗೆ 2 ವಿಭಾಗಗಳಲ್ಲಿಯೂ ತಲಾ ಪ್ರಥಮ ರೂ. 5000/- ದ್ವಿತೀಯ ರೂ. 3000/- ತೃತೀಯ ರೂ.1000/- ಮತ್ತು ಒಂದು ಸಮಾಧಾನಕರ ಬಹುಮಾನ ರೂ.500/- ನೀಡಲಾಗುವುದು. ಸ್ಪರ್ಧೆಯ ಸಮಯ : ಮಧ್ಯಾಹ್ನ 2 ರಿಂದ 4.30ವರೆಗೆ ನಡೆಯಲಿದೆ.
ಆಸಕ್ತರು ದೂರವಾಣಿ ಮುಖಾಂತರ ಹೆಸರನ್ನು ನೋಂದಾಯಿಸಬಹುದು. ಮೊ:7483946578 (ಕಚೇರಿ ಸಮಯದಲ್ಲಿ ಮಾತ್ರ) ಮತ್ತು ಕಾರ್ಯಕ್ರಮದ ಸಂಚಾಲಕರಾದ ನಫೀಸಾ ಮಿಸ್ರಿಯಾ ಸದಸ್ಯರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇವರನ್ನು ಸಂಪರ್ಕಿಸಬಹುದು. ಮೊ: 9743362663. ಸಂಜೆ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ಮತ್ತು ವಿಜೇತರಿಗೆ ಬಹುಮಾನ ಪುರಸ್ಕಾರ ನಡೆಯಲಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.