×
Ad

ಕಾಪು ಪುರಸಭೆ: ವಿಶ್ವ ಮಹಿಳಾ ದಿನಾಚರಣೆ

Update: 2020-03-07 20:42 IST

ಉಡುಪಿ, ಮಾ.7: ಕಾಪು ಪುರಸಭೆ ಮತ್ತು ಮಹಾಜನ ಮಹಿಳಾ ಮಂಡಳಿ ಕಲ್ಯ, ಕಾಪು ಇವರ ವತಿಯಿಂದ ಶನಿವಾರ ಕಲ್ಯ ಮಹಾಜನ ಮಹಿಳಾ ಮಂಡಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಜಿಲ್ಲೆಯ ಡೇ-ನಲ್ಮ್ ಯೋಜನೆಯ ಅಭಿಯಾನ ವ್ಯವಸ್ಥಾಪಕಿ ಗೀತಾ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಗುಲಾಬಿ ಪಾಲನ್, ಮಹಾಜನ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ನಳಿನಿದೇವಿ, ಕಾಪು ಪುರಸಬೆ ಸಮುದಾಯ ಸಂಘಟಕ ಬಾಲೇಶ್, ಕಾಪು ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ದಿನೇಶ್, ಕಾಪು ಪುರಸಬೆ ಪ್ರಥಮದರ್ಜೆ ಸಹಾಯಕಿ ಮಾಲತಿ, ಕಾಪು ಪುರಸಭೆಯ ಬಾಲಕೃಷ್ಣ ನಾಯಕ್, ಮಿತ್ರ ಮಂಡಳಿಯ ಅಧ್ಯಕ್ಷ ಎ.ಮಹಮ್ಮದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪುರಸಭೆಯ ಮಹಿಳಾ ಪೌರ ಕಾರ್ಮಿಕರಾದ ಗಂಗವ್ವ ಮತ್ತು ಲಕ್ಷ್ಮೀ ಇವರನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಸದಸ್ಯೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಕಾಪು ಉಳಿತಾಯ ಗುಂಪುಗಳ ಸದಸ್ಯರು, ಪಿಎಂಎವೈ ಯೋಜನೆ (ವಸತಿ) ಫಲಾನುಭವಿಗಳು ಮತ್ತು ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಸುನಿತಾ ಸ್ವಾಗತಿಸಿದರು. ಮಹಾಜನ ಮಹಿಳಾ ಮಂಡಳಿಯ ಸದಸ್ಯೆ ಹೇಮ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News