×
Ad

‘ರ್ಯಾಡ್‌ಕಾನ್ 2020’ ಐಆರ್‌ಐಎ 36ನೇ ವಾರ್ಷಿಕ ಸಮ್ಮೇಳನ

Update: 2020-03-07 21:05 IST

ಮಂಗಳೂರು : ಕರ್ನಾಟಕ ರಾಜ್ಯ ಇಂಡಿಯನ್ ರೇಡಿಯಾಲಾಜಿಕಲ್ ಮತ್ತು ಇಮೇಜಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ‘ರ್ಯಾಡ್‌ಕಾನ್ 2020’ ಐಆರ್‌ಐಎ 36ನೇ ವಾರ್ಷಿಕ ಸಮ್ಮೇಳನವು ಶನಿವಾರ ಜರುಗಿತು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥನಾರಾಯಣ ಹೊಸ ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸೌಲಭ್ಯಗಳನ್ನು ವೈದ್ಯಕೀಯ ರಂಗ ಹೆಚ್ಚು ಅಳವಡಿಸಿಕೊಳ್ಳಬೇಕು. ಆ ಮೂಲಕ ಜನರ ಆರೋಗ್ಯಕ್ಕೆ ಪರಿಣಾಮಕಾರಿ ಸೇವೆಯನ್ನು ನೀಡಬೇಕು ಎಂದು ಕರೆ ನೀಡಿದರು.

ಕರ್ನಾಟಕದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳಿವೆ. ಗುಣಮಟ್ಟದ ವೈದ್ಯಕೀಯ ಸೇವೆಗೂ ರಾಜ್ಯ ಹೆಸರುವಾಸಿಯಾಗಿದೆ. ಅತ್ಯುತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುವ ಮತ್ತು ಸಮಯ ಉಳಿತಾಯ ಮಾಡುವಂತಹ ಆಧುನಿಕ ತಂತ್ರಜ್ಞಾನಗಳ ಮೂಲಕ ರೋಗಿಗಳ ಸೇವೆಗೆ ವೈದ್ಯರು ತೊಡಗಿಸಿಕೊಳ್ಳಬೇಕು ಎಂದು ಅಶ್ವಥನಾರಾಯಣ ಹೇಳಿದರು.

ಮಣಿಪಾಲ್ ಅಕಾಡಮಿ ಆ್ ಹೈಯರ್ ಎಜುಕೇಶನ್‌ನ ಪ್ರೊಚಾನ್ಸ್‌ಲರ್ ಡಾ.ಎಚ್.ಎಸ್. ಬಳ್ಳಾಲ್ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಿದರು. ರಾಷ್ಟ್ರೀಯ ಐಆರ್‌ಐಎ ಅಧ್ಯಕ್ಷ (ಚುನಾಯಿತ) ಡಾ.ಸಿ. ಮಂಜುನಾಥ್ ಮಾತನಾಡಿದರು. ಕರ್ನಾಟಕ ರಾಜ್ಯ ಐಆರ್‌ಐಎ ಅಧ್ಯಕ್ಷ ಡಾ. ಕೃಷ್ಣಪ್ಪ, ಕಾರ್ಯದರ್ಶಿ ಡಾ. ವಿಜಯಸಾರಥಿ, ಅಧ್ಯಕ್ಷ (ಚುನಾಯಿತ) ಡಾ. ಮಹೇಶ ಬಿ. ಎಂ. ಮೊದಲಾದವರು ಉಪಸ್ಥಿತರಿದ್ದರು.
ಸಂಘಟನಾಧ್ಯಕ್ಷ ಡಾ. ಗಣೇಶ್ ಕೆ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ರವಿಚಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News