×
Ad

ಮಾ. 8: ಸಿಎಎ ವಿರೋಧಿಸಿ ಜಪ್ಪಿನಮೊಗರುನಲ್ಲಿ ಪೌರತ್ವ ಸಂರಕ್ಷಣಾ ಸಮಾವೇಶ

Update: 2020-03-07 21:07 IST

ಮಂಗಳೂರು, ಮಾ.8: ಕೇಂದ್ರ ಸರಕಾರವು ಜಾರಿಗೆ ತಂದಿರುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಾಗೂ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ ಮಾ.8ರಂದು ಮಧ್ಯಾಹ್ನ 2ಕ್ಕೆ ಜಪ್ಪಿನಮೊಗರುವಿನ ಮಹಾತ್ಮಾಗಾಂಧಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೇದಿಕೆಯಲ್ಲಿ ಪೌರತ್ವ ಸಂರಕ್ಷಣಾ ಸಮಾವೇಶ ನಡೆಯಲಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಪ್ರಗತಿಪರ ಚಿಂತಕ ಸ್ವಾಮಿ ಅಗ್ನಿವೇಶ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಭಾಪತಿ ರಮೇಶ್ ಕುಮಾರ್, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಯು.ಟಿ.ಖಾದರ್ ಮತ್ತು ರಹೀಮ್ ಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಅಂತರ್‌ರಾಷ್ಟ್ರೀಯ ಶೈಕ್ಷಣಿಕ ವೀಕ್ಷಕ ಡಾ.ಪೌಲ್ ನೂಮಾನ್, ಉಡುಪಿ ಖಾಝಿ ಅಲ್ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್, ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಮಸ್ತ ಕೇರಳ ಜಮೀಯತುಲ್ ಉಲೆಮಾ ಕಾರ್ಯದರ್ಶಿ ಕೊಯ್ಯಿಡ್ ಮುಹಮ್ಮದ್ ಮುಸ್ಲಿಯಾರ್, ಸಮಸ್ತ ಮುಶಾವರ ಸದಸ್ಯ ಬಂಬ್ರಾಣ ಅಬ್ದುಲ್ ಖಾದರ್ ಅಲ್ಖಾಸಿಮಿ, ಐಯುಎಂಎಲ್ ಅಧ್ಯಕ್ಷ ಮುನವ್ವರಲಿ ಶಿಹಾಬ್ ತಂಙಳ್ ಹಾಗೂ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರತ್ ಮತ್ತಿತರ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ನೇತಾರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News