ಬ್ಯಾರಿ ಅಕಾಡಮಿಗೆ ಸಹ ಸದಸ್ಯರ ಆಯ್ಕೆ
Update: 2020-03-07 21:10 IST
ಮಂಗಳೂರು, ಮಾ.7: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಗೆ ಮೂವರು ಸಹ ಸದಸ್ಯರನ್ನು ಇತ್ತೀಚೆಗೆ ನಡೆದ ಅಕಾಡಮಿಯ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಉಪ್ಪಿನಂಗಡಿಯ ಜಲೀಲ್ ಮುಕ್ರಿ, ಅಬ್ದುಲ್ ರಝಾಕ್ ಸಾಲ್ಮರ, ಮೈಸೂರಿನ ನಫೀಸಾ ಮಿಸ್ರಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.