×
Ad

ಮಾ. 8 : ಎಸ್ಸೆಸ್ಸೆಫ್ ಜಿಲ್ಲಾ ಬ್ಲಡ್ ಸೈಬೋ 150 ನೇ ರಕ್ತದಾನ ಶಿಬಿರ

Update: 2020-03-07 21:17 IST

ಮಂಗಳೂರು : ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಇದರ 150 ನೇ ರಕ್ತದಾನ ಶಿಬಿರವು ಕೆಮ್ಮಾನ್ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನ್ ಪಲ್ಕೆ ಕಡೇಶ್ವಾಲ್ಯದಲ್ಲಿ ಮಾ.8ರಂದು ನಡೆಯಲಿದೆ.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜೆ.ಎಂ.ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಲಿದ್ದಾರೆ. ಟಿ.ಎಂ.ಮುಹ್ಯಿದ್ದೀನ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದಾರೆ. ಮಾಣಿ ಸೆಕ್ಟರ್ ಅಧೀನದ ಕೆಮ್ಮಾನ್ ಶಾಖೆ ಆತಿಥ್ಯ ವಹಿಸಲಿದೆ.

ಮಾ.8ರಂದು ಬೆಳಗ್ಗೆ 9 ಗಂಟೆಗೆ ಮೊಗರ್ಪಣೆ ಶಾಖಾ ವತಿಯಿಂದ 151 ನೇ ಕ್ಯಾಂಪ್ ಕೂಡಾ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಚೇರ್ಮೇನ್ ತೌಸೀಫ್ ಸ‌ಅದಿ ಹರೇಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News