×
Ad

ಬಾಹ್ಯಾಕಾಶ ನಿಲ್ದಾಣದಲ್ಲಿ ಕ್ಯಾಬೇಜ್ ಬೆಳೆದ ಗಗನಯಾತ್ರಿಗಳು

Update: 2020-03-07 22:05 IST
ಫೈಲ್ ಚಿತ್ರ

ವಾಶಿಂಗ್ಟನ್, ಮಾ. 7: ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಗಗನಯಾತ್ರಿಗಳು ಕ್ಯಾಬೇಜ್ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ತರಕಾರಿಯು ರೋಗ ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳಿಂದ ಮುಕ್ತವಾಗಿದೆ ಹಾಗೂ ತಿನ್ನಲು ಸುರಕ್ಷಿತವಾಗಿದೆ. ಇದು ಕನಿಷ್ಠ ಭೂಮಿಯಲ್ಲಿ ಬೆಳೆಯುವ ಕ್ಯಾಬೇಜ್‌ನಷ್ಟೇ ಪೌಷ್ಟಿಕವಾಗಿದೆ.

ಭೂಮಿಯ ಹೋಲಿಕೆಯಲ್ಲಿ ಕಡಿಮೆ ಗುರುತ್ವಾಕರ್ಷಣೆ ಮತ್ತು ಹೆಚ್ಚು ವಿಕಿರಣದ ಹೊರತಾಗಿಯೂ ಇದನ್ನು ಬೆಳೆದಿರುವುದು ಸಾಧನೆಯಾಗಿದೆ.

ಇದು ಗಗನಯಾತ್ರಿಗಳ ಆಹಾರದಲ್ಲಿ ಅಪೇಕ್ಷಣೀಯ ಬದಲಾವಣೆಯನ್ನು ಮಾಡುವುದರ ಜೊತೆಗೆ, ಅವರಿಗೆ ಹೆಚ್ಚುವರಿ ಪೊಟಾಶಿಯಮ್ ಮತ್ತು ಕೆ, ಬಿ1 ಮತ್ತು ಸಿ ವಿಟಮಿನ್‌ಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳು ಮೊದಲೇ ಪ್ಯಾಕ್ ಮಾಡಿಟ್ಟ ಆಹಾರಗಳಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತವೆ ಹಾಗೂ ದೀರ್ಘ ಸಮಯ ಸಂಗ್ರಹಿಸಲ್ಪಡುವ ಆಹಾರಗಳಲ್ಲಿ ನಶಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News