ವಿಶಿಷ್ಟ ಮಹಿಳಾ ದಿನಾಚರಣೆ: ಮೀನು ಮಾರಾಟ ಮಹಿಳೆಯರಿಗೆ ಸನ್ಮಾನ
ಉಡುಪಿ, ಮಾ.7: ಉದ್ಯಾವರ ಸಂತ ಫ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಹಾಗೂ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ಮೀನು ಮಾರಾಟ ಮಾಡುವ ಮಹಿಳೆಯರನ್ನು ಉಡುಪಿ ಮೀನು ಮಾರುಕಟ್ಟೆಯಲ್ಲಿ ಸನ್ಮಾನಿಸುವ ಮೂಲಕ ವಿಶ್ವ ಮಹಿಳಾ ದಿನವನು್ನ ಇಂದು ವಿಶಿಷ್ಟವಾಗಿ ಆಚರಿಸಲಾಯಿತು.
ಹಿರಿಯ ಮೀನು ಮಾರಾಟ ಮಹಿಳೆಯರಾದ ಬೇಬಿ ಸಾಲ್ಯಾನ್ ಕೊಡ ವೂರು, ಲಲಿತಾ ಅಮೀನ್ ಪಡುಕೆರೆ, ಸುಮತಿ ಬಂಗೇರ ಪಿತ್ರೋಡಿ ಸೇರಿದಂತೆ ಮಾರುಕಟ್ಟೆಯಲ್ಲಿ ದುಡಿಯುವ ಸುಮಾರು 100ಕ್ಕೂ ಅಧಿಕ ಮಹಿಳೆಯರನ್ನು ಗೌರವಿಸಲಾಯಿತು
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಸಮಾಜ ಸೇವಕ ಅಮೃತ್ ಶೆಣೈ, ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಮಾತನಾಡಿದರು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೊೀಜ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಚರ್ಚ್‌ನ ಪಾಲನ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ನರೋನ್ಹ, ಐಸಿವೈಎಂ ಅಧ್ಯಕ್ಷ ರೋಯಲ್ ಕೆಸ್ತಲಿನೋ, ಸಮಿತಿಯ ನಿರ್ದೇಶಕ ರಾದ ಏರಿಕ್ ಮೆನೇಜಸ್, ಟರೆಂನ್ಸ್ ಪಿರೇರಾ, ಜೆರಾಲ್ಡ್ ಪಿರೇರಾ, ರೋನಾಲ್ಡ್ ಡಿಸೋಜ, ಲೀನಾ ಮೆಂಡೋನ್ಸಾ ಮೊದಲಾದವರು ಉಪಸ್ಥಿತ ರಿದ್ದರು. ಸಮಿತಿಯ ಸಂಚಾಲಕ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.