×
Ad

ಮಾ.12: ಬಂಟರ ಚಾವಡಿ, ಕೃಷ್ಣ ಸುಧಾಮ ವೇದಿಕೆ ಉದ್ಘಾಟನೆ

Update: 2020-03-07 22:20 IST

ಪಡುಬಿದ್ರಿ: ಬಂಟರ ಸಂಘದ ಪಡುಬಿದ್ರಿ ಬಂಟರ ಭವನದಲ್ಲಿ ಸದ್ಗುರು ನಿತ್ಯಾನಂದ ಪರಮ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬಂಟರ ಚಾವಡಿ ಸಭಾಂಗಣ-ಕೃಷ್ಣ ಸುಧಾಮ ವೇದಿಕೆ ಮತ್ತು ಆವರಣ ಗೋಡೆ ಮಾ. 12ರಂದು ಬೆಳಗ್ಗೆ 10.5ಕ್ಕೆ ಉದ್ಘಾಟನೆ ನಡೆಯಲಿದೆ.

ಶನಿವಾರ ಬಂಟರ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಹಿತಿ ನೀಡಿ, ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟರ ಭವನ ಆಕರ್ಷಣೀಯವಾದ ಕಟ್ಟಡವಾಗಿದ್ದು, ಬಂಟ ಸಮಾಜಕ್ಕೆ ಹೆಮ್ಮೆಯ ಸಂಕೇತವಾಗಿದೆ. ಪಡುಬಿದ್ರಿ ಬಂಟರ ಸಂಘದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ವಿಶಾಲವಾದ 3 ಸಭಾಂಗಣವಿದ್ದು ಬಂಟರ ಭವನವನ್ನು ಸಂಪೂರ್ಣ ಹವಾ ನಿಯಂತ್ರಣಗೊಳಿಸಲಾಗುತ್ತಿದ್ದು, ಆಕರ್ಷಣೀಯವಾದ ಬಂಟರ ಚಾವಡಿ ಸಭಾಭವನ ನಿರ್ಮಾಣವಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಹವಾನಿಯಂತ್ರಿತ ಮಿನಿ ಸಭಾಂಗಣ ವ್ಯವಸ್ಥೆಗೊಳಿಸಲಾಗುತ್ತಿದೆ ಎಂದರು.

ಮಾರ್ಚ್ 11ರಂದು 4 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಸದ್ಗುರು ನಿತ್ಯಾನಂದ ಗುರುಗಳ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಮಾರ್ಚ್ 12ರ ಬೆಳಿಗ್ಗೆ 10.5 ಗಂಟೆಗೆ ಪ್ರತಿಷ್ಠಾ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಭಾಗವಹಿಸಲಿದ್ದಾರೆ. 

ಬಂಟರ ಚಾವಡಿ ಸಭಾಭವನ, ಪಾರ್ಕಿಂಗ್ ವ್ಯವಸ್ಥೆ, ಹವಾನಿಯಂತ್ರಿತ ಮಿನಿ ಸಭಾಂಗಣದ ಉದ್ಘಾಟನೆ ಸಂಜೆ 4.30ಕ್ಕೆ ನಡೆಯಲಿದೆ. 5ಗಂಟೆಗೆ ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಿನಯ್ ಹೆಗ್ಡೆಯವರು ಉದ್ಘಾಟಿಸಲಿದ್ದಾರೆ. ಎಂ.ಆರ್.ಜಿ ಗ್ರೂಪ್‍ನ ಎಂ.ಡಿ ಕೆ. ಪ್ರಕಾಶ್ ಶೆಟ್ಟಿಯವರು, ದಾನಿಗಳಾದ ಬೋಳ ರಘುರಾಮ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಎಂ.ಎನ್.ರಾಜೇಂದ್ರಕುಮಾರ್, ಐಕಳ ಹರೀಶ್ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ ಸಹಿತ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಂಟ್ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷರಾದ ಎರ್ಮಾಳ್ ಶಶಿಧರ್ ಕೆ. ಶೆಟ್ಟಿ, ಸಿರಿಮುಡಿ ದತ್ತಿನಿಧಿಯ ಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿ ವಿವರಿಸಿದರು.

ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ ಪಲ್ಲವಿ, ಜತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಅವರಾಲು, ಮಹಿಳಾ ಸಮಿತಿಯ ಅಧ್ಯಕ್ಷೆ ನೇತ್ರಾವತಿ ಶೆಟ್ಟಿ, ಯುವ ಸಮಿತಿಯ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಮಾದವ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ ಪೇಟೆಮನೆ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ವಿನಯಶೆಟ್ಟಿ ಎರ್ಮಾಳು, ಡಾ. ಮನೋಜ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಸಂಚಾಲಕ ಜಯ ಶೆಟ್ಟಿ ಪದ್ರ, ಸಂಸ್ಕೃತಿಕ ಸಂಚಾಲಕ ಉದಯಕುಮಾರ್ ಶೆಟ್ಟಿ, ಮುರಳೀನಾಥ್ ಶೆಟ್ಟಿ, ಧನಪಾಲ್ ಶೆಟ್ಟಿ, ಶ್ರೀನಾಥ್ ಹೆಗ್ಡೆ, ಹರೀಶ್ ಶೆಟ್ಟಿ ಪಾದೆಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News