ಸಮುದ್ರ ಅಲೆಗಳ ಮಧ್ಯೆ ಪತ್ರಕರ್ತರ ನೌಕಾ ವಿಹಾರ
ಮಂಗಳೂರು, ಮಾ.7:ನಗರದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ವಿವಿಧ ಜಿಲ್ಲೆಗಳ ನೂರಾರು ಪತ್ರಕರ್ತರು ಶನಿವಾರ ಸಮುದ್ರ ಅಲೆಗಳ ಮಧ್ಯೆ ನೌಕಾ ವಿಹಾರ ನಡೆಸಿದರು.
ಸುಮಾರು 800ಕ್ಕೂ ಅಧಿಕ ಪತ್ರಕರ್ತರಿಗೆ ರಾಣಿ ಅಬ್ಬಕ್ಕ ನೌಕೆಯಲ್ಲಿ ಸಮುದ್ರ ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪತ್ರಕರ್ತರು ಸಮುದ್ರ ಅಲೆಗಳ ತೇಲುತ್ತಾ ಸಾಗಿದ ನೌಕೆಯಲ್ಲಿ ಸಂಭ್ರಮಿಸಿದರು. ನೌಕಾ ವಿಹಾರದ ಕುರಿತು ಪ್ರತಿನಿಧಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಮುದ್ರ ವಿಹಾರದ ಸೊಬಗನ್ನು ಆಸ್ವಾದಿಸಿದರು.
ನೌಕೆಯಲ್ಲಿ ವಿಚಾರಗೋಷ್ಠಿ: ಸಮ್ಮೇಳನದ 2ನೇ ದಿನವಾದ ರವಿವಾರ ನೌಕೆಯಲ್ಲಿ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ. ಬೆಳಗ್ಗೆ 8ಕ್ಕೆ ರಾಣಿ ಅಬ್ಬಕ್ಕ ನೌಕೆಯಲ್ಲಿ ಕರಾವಳಿ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಈ ವಿಚಾರಗೋಷ್ಠಿಗೆ ತೆರಳುವವರಿಗೆ ಬೆಳಗ್ಗೆ 7:45ಕ್ಕೆ ಪುರಭವನದ ಮುಂಭಾಗದಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.