×
Ad

ದೆಹಲಿ ಹತ್ಯಾಕಾಂಡ: ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

Update: 2020-03-07 22:34 IST

ಉಪ್ಪಿನಂಗಡಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ಸಮಿತಿಯು ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸಿತು.

ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮುಸ್ತಾಫ ಕೆಂಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಮಾಲೀಕುದೀನಾರ್ ಜುಮಾ ಮಸೀದಿಯ ಖತೀಬ್ ನಝೀರ್ ಅಜ್ಹರಿ, ಸಾಮಾಜಿಕ ಮುಂದಾಳು ನಝೀರ್ ಮಠ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಎಸ್‍ಡಿಪಿಐ ಮುಖಂಡ ಅಬ್ದುಲ್ ರಝಾಕ್ ಸೀಮಾ ಮುಖ್ಯ ಭಾಷಣ ಮಾಡಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಹನೀಫ್ ಕೆನರಾ, ಶಬೀರ್ ಕೆಂಪಿ, ತೌಸೀಫ್ ಯು.ಟಿ., ಇಸ್ಮಾಯಿಲ್ ತಂಙಳ್, ಹಾರೂನ್ ಅಗ್ನಾಡಿ, ಶಬೀರ್ ನಂದಾವರ, ಅಸ್ಕರ್ ಅಲಿ ಮೇದರಬೆಟ್ಟು, ಮನ್ಸೂರು ಕುದ್ಲೂರು, ಮುಸ್ತಾಫ ಲತೀಫಿ, ಸಪ್ವಾನ್ ಮತ್ತಿತರರು ಉಪಸ್ಥಿತರಿದ್ದರು.

ಅಬ್ದುಲ್ ರಹೀಮಾನ್ ಯುನಿಕ್ ಸ್ವಾಗತಿಸಿದರು. ಝಕಾರಿಯಾ ಕೊಡ್ಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಇರ್ಷಾದ್ ಯು.ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News