ದುಬೈ : ನ್ಯೂ ಮಾರ್ಕ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ

Update: 2020-03-07 17:21 GMT

ದುಬೈ : ನ್ಯೂ ಮಾರ್ಕ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮಂಗಳೂರು ಮತ್ತು ಕೊಂಕಣ್ಸ್ ಬೆಲ್ಸ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದುಬೈಯ ಲತೀಫಾ ಬ್ಲಡ್ ಡೊನೇಷನ್ ಸೆಂಟರ್ ನಲ್ಲಿ ನಡೆಯಿತು.

ಶಿಬಿರದಲ್ಲಿ ನೊಯೆಲ್ ಡಿ ಅಲ್ಮೈಡಾ, ಬಾಲ ಸಾಲಿಯಾನ್, ಕೊಂಕಣ್ಸ್ ಬೆಲ್ಸ್ ಅಧ್ಯಕ್ಷ ನೆಲ್ಸನ್ ಪಿಂಟೋ, ಪ್ರಧಾನ ಕಾರ್ಯದರ್ಶಿ ರೀನಾ ಮರೀನಾ ಗಲ್ಬಾವೊ ಮತ್ತು ಸದಸ್ಯರು ಹಾಗೂ ನ್ಯೂ ಮಾರ್ಕ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಸದಸ್ಯರಾದ ರೋಶನ್, ಅನಿಲ್, ರಾಕೇಶ್ ಶೆಟ್ಟಿ, ಪ್ರವೀಣ್, ಭರತ್, ಯಶ್ ಕರ್ಕೇರಾ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಸಿರಾಜುದ್ದೀನ್ ಪರ್ಲಡ್ಕ, ಮೆಹತಾಬ್ ಕೈಕಂಬ, ಇಝ್ಝುದ್ದೀನ್ ದೇರಳಕಟ್ಟೆ, ಫಾರೂಕ್ ದೇರಳಕಟ್ಟೆ ಉಪಸ್ಥಿತರಿದ್ದರು.

ರಕ್ತದಾನ ಶಿಬಿರಕ್ಕೆ ಮೆಗಾ ಸ್ಪೀಡ್ ಕಾರ್ಗೋ ಸರ್ವಿಸ್  ಮಾಲಕ ವಾಲ್ಟರ್ ಪಿರೇರಾ,  ಲೆತೀಸಿಯಾ ಪಿರೇರಾ ಮತ್ತು ಸೋಲಿಡ್ ರೋಕ್ ಅಡ್ವರ್ಟೈಸಿಂಗ್ ಮಾಲಕರಾದ ಕ್ರಿಸ್ಟೋಫರ್ ಹಾಗೂ ಅನ್ಸಾರ್ ಬಾರ್ಕೂರು ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News