×
Ad

ಮಂಗಳೂರು ವಿವಿ: ರಾಷ್ಟ್ರೀಯ ವಿಚಾರ ಸಂಕಿರಣ

Update: 2020-03-08 21:12 IST

ಮಂಗಳೂರು, ಮಾ.8: ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞ್ಞಾನ ವಿಭಾಗವು ಯುಜಿಸಿ-ವಿಶೇಷ ನೆರವು ಕಾರ್ಯಕ್ರಮದಡಿ ‘ಮಾಲಿನ್ಯ ಮತು ಜೈವಿಕ-ಪರಿಹಾರ-ಪ್ರಸ್ತುತ ಸನ್ನಿವೇಶ ಹಾಗೂ ಭವಿಷ್ಯದ ನಿರೀಕ್ಷೆಗಳು’ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವು ಶನಿವಾರ ಮಂಗಳಾ ಸಭಾಂಗಣದಲ್ಲಿ ಜರುಗಿತು.

ಯುನೆಸ್ಕೊ ಸೆಂಟರ್ ಪಾರ್ ಮೆಡಿಕಲ್ ಆ್ಯಂಡ್ ಮೆರೈನ್ ಟಕ್ನಾಲಜಿ ಹಾಗೂ ನಿರ್ದೇಶಕ ಪ್ರೊ.ಇಂದ್ರಾಣಿ ಕರುಣಾಸಾಗರ್, ನಿಟ್ಟೆ ವಿವಿ ವಿಚಾರ ಸಂಕಿರ್ಣವನ್ನು ಉದ್ಛಾಟಿಸಿದರು.

ಬಳಿಕ ಮಾತನಾಡಿದ ಅವರು ಜನಸಂಖ್ಯಾ ಸ್ಫೋಟ ಹಾಗು ಮಾನವನ ಹೆಚ್ಚಿದ ಬೇಡಿಕೆಗಳನ್ನು ಪೂರೈಸುವ ಹೆಸರಿನಲ್ಲಿ ಅಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಪರಿಸರದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿದೆ. ತ್ಯಾಜ್ಯ ನಿರ್ವಹಣೆಗೆ ಕಸಗಳನ್ನು ಸುಡುವುದು ಪರಿಹಾರವಲ್ಲ. ಇದು ಅವೈಜ್ಞ್ಞಾನಿಕ ಮತ್ತು ಮಾಲಿನ್ಯವನ್ನು ಇನ್ನಷ್ಟೂ ಹೆಚ್ಚಿಸುತ್ತದೆ. ಮಾಲಿನ್ಯಕಾರಕಗಳನ್ನು ಕಡಿಮೆಗೊಳಿಸಲು ಅನೇಕ ನೈಸರ್ಗಿಕ ವ್ಯವಸ್ಥೆಗಳಿವೆ. ಸೂಕ್ಷ್ಮಾಣುಜೀವಿಗಳು ಕಣ್ಣಿಗೆ ಕಾಣದಿದ್ದರೂ ತ್ಯಾಜ್ಯಗಳನ್ನು ಕೊಳೆಸುವ ಮೂಲಕ ಪ್ರಕೃತಿಯಲ್ಲಿ ಗಮನಾರ್ಹ ರೀತಿಯಲ್ಲಿ ಸೇವೆ ಸಲ್ಲಿಸುತ್ತವೆ ಎಂದರು.

ಪ್ರೊ. ಕೆ. ಆರ್. ಶ್ರೀಧರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ಬಾಲಕೃಷ್ಣ ಹೆಗ್ಡೆ, ಪ್ರೊ. ಮುತ್ತುಕುಮಾರ್ ಮುತ್ತುಚಾಮಿ, ಡಾ. ಸಮಿರ್ ದಾಮರೆ ಮಂಡಿಸಿದ ವಿಚಾರದ ಮೇರೆಗೆ ಚರ್ಚೆ ನಡೆಯಿತು.

ಪ್ರೊ. ಪ್ರಶಾಂತ ನಾಯ್ಕ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಚಾಲಕ ಪ್ರೊ.ಚಂದ್ರ ಎಂ. ಕಾರ್ಯಕ್ರಮದ ಮುನ್ನೋಟ ನೀಡಿದರು. ಯು.ಜಿ.ಸಿ-ಸ್ಯಾಪ್ ಸಂಯೋಜಕ ಪ್ರೊ. ಚಂದ್ರಕಲಾ ಶೆಣೈ ಕೆ. ಯುಜಿಸಿ -ಸ್ಯಾಪ ಚಟುವಟಿಕೆಗಳ ಬಗ್ಗೆ ಮಾಹಿತಿ ನಿಡಿದರು. ಡಾ. ತಾರಾವತಿ ಎನ್.ಸಿ. ವಂದಿಸಿದರು. ಪ್ರೊ. ಮೋನಿಕ ಸದಾನಾಂದ ತಾಂತ್ರಿಕ ಅಧಿವೇಶನ ನಡೆಸಿಕೊಟ್ಟರು. ಲವೀನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News