×
Ad

ಪೌರತ್ವ ಕಾಯ್ದೆ ವಿರುದ್ಧ ಜನಜಾಗೃತಿಗೆ ಚಾಲನೆ

Update: 2020-03-08 21:15 IST

ಬೈಂದೂರು, ಮಾ.8: ಸಿಪಿಐಎಂ ಬೈಂದೂರು ವಲಯ ಸಮಿತಿ ನೆತೃತ್ವದಲ್ಲಿ ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ವಿರುದ್ಧ ಜನಜಾಗೃತಿಗಾಗಿ ಮನೆ, ಮನೆ ಪ್ರಚಾರಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.

ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ಮನೆಗಳಿಗೆ ಭೇಟಿ ನೀಡಿದ ಸಿಪಿಎಂ ಮುಖಂಡರು ಈ ಕುರಿತ ಕರಪತ್ರಗಳನ್ನು ವಿತರಿಸಿ ಜನ ಜಾಗೃತಿ ಮೂಡಿಸಿದರು. ಈ ಪ್ರಚಾರಾಭಿಯಾನವು ಮಾ.23ರವರೆಗೆ ನಡೆಯಲಿದೆ.

ಪಕ್ಷದ ಜಿಲ್ಲಾ ಮುಖಂಡ ವೆಂಕಟೇಶ್ ಕೋಣಿ ಸೇರಿದಂತೆ ಕೃಷಿಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘದ ಮುಖಂಡರು ಈ ಪ್ರಚಾರೊಂದಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News