×
Ad

"ಮುಂದಿನ ಸಿಎಂ ಅಭ್ಯರ್ಥಿ ನಾನೇ": ಬಿಹಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಜೆಡಿಯು ನಾಯಕನ ಪುತ್ರಿ

Update: 2020-03-09 17:30 IST
Photo: Twitter(@pushpampc13)

ಪಾಟ್ನಾ: ಜೆಡಿ(ಯು) ನಾಯಕ ಬಿನೋದ್ ಚೌಧುರಿ ಅವರ ಲಂಡನ್ ನಿವಾಸಿ ಪುತ್ರಿ ಪುಷ್ಪಮ್ ಪ್ರಿಯಾ ಚೌಧುರಿ ತಮ್ಮ 'ಪ್ಲೂರಲ್ಸ್' ಎಂಬ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸುವ ಮೂಲಕ ಹಾಗೂ ತಮ್ಮನ್ನು 2020 ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಎಂದು  ಕರೆಸಿಕೊಳ್ಳುವ ಮೂಲಕ ಬಿಹಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಪ್ರಿಯಾ ಅವರ ನೂತನ ಪಕ್ಷ ಹಾಗೂ ಅವರು ಸಿಎಂ ಅಭ್ಯರ್ಥಿಯಾಗಲಿದ್ದಾರೆಂಬ ಮಾಹಿತಿ ನೀಡುವ ಇಡೀ ಪುಟ ಜಾಹಿರಾತು ಮಾರ್ಚ್ 8ರ ಹಲವು ಆಂಗ್ಲ ಹಾಗೂ ಹಿಂದಿ  ದೈನಿಕಗಳಲ್ಲಿ ಪ್ರಕಟಗೊಂಡಿದೆ. ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಕಟಗೊಂಡ ಈ ಜಾಹೀರಾತಿನಲ್ಲಿ 'ಪ್ಲೂರಲ್ಸ್' ಎಲ್ಲರೂ ಆಡಳಿತ ನಡೆಸುವಂತಹ ವೇದಿಕೆ ಎಂದು ಅವರು ಬಣ್ಣಿಸಿದ್ದಾರೆ. ಬಿಹಾರವನ್ನು ಪ್ರೀತಿಸುವವರು ಹಾಗೂ ರಾಜಕೀಯವನ್ನು ದ್ವೇಷಿಸುವವರಿಗೆ ಈ ವೇದಿಕೆ, ಬಿಹಾರಕ್ಕೆ ಇನ್ನೂ ಉತ್ತಮವಾದುದು ಬೇಕಾಗಿದೆ. ತಮ್ಮ ಜತೆ ಸೇರಿ ಈಗಿನ ಸರಕಾರದಿಂದ ಅಧಿಕಾರವನ್ನು  ಸೆಳೆಯಬೇಕು,'' ಎಂದು ಅವರು ಬರೆದಿದ್ದಾರೆ.

"ನಾನು ಸಿಎಂ ಆದರೆ ಬಿಹಾರ ದೇಶದಲ್ಲಿಯೇ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯವಾಗಲಿದೆ ಹಾಗೂ 2030ರ ಹೊತ್ತಿಗೆ ಯಾವುದೇ ಯುರೋಪ್ ದೇಶಕ್ಕೆ ಸಮನಾಗಿ ಮೂಡಿಬರಲಿದೆ,'' ಎಂದೂ ಈ ಜಾಹೀರಾತಿನಲ್ಲಿ ಕಾಣಿಸಿರುವ ಬಹಿರಂಗ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ತಮ್ಮ ಶೈಕ್ಷಣಿತ ಅರ್ಹತೆಯ ಬಗ್ಗೆಯೂ ಅವರು ಅದರಲ್ಲಿ ಬರೆದಿದ್ದು ಇಗ್ಲೆಂಡಿನ ಯುನಿವರ್ಸಿಟಿ ಆಫ್ ಸಸೆಕ್ಸ್ ನಲ್ಲಿ ಡೆವಲೆಪ್ಮೆಂಟ್ ಸ್ಟಡೀಸ್‍ನಲ್ಲಿ ಸ್ನಾತ್ತಕೋತ್ತರ ಪದವಿ, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಆಕೆ ಪಡೆದಿದ್ದಾರೆ.

ಪ್ರಿಯಾ ಬಿಹಾರದ ದರ್ಭಾಂಗ ಜಿಲ್ಲೆಯವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News