ಕಟಪಾಡಿ: ಕಾರ್ಪೊರೇಟ್ ಕ್ರಿಕೆಟ್ ಬ್ಯಾಷ್‌ಗೆ ಚಾಲನೆ
ಕಾಪು, ಮಾ.9: ವಿ.ಎಫ್.ಸಿ. ಕಟಪಾಡಿ ಇದರ ಆಶ್ರಯದಲ್ಲಿ ಕಟಪಾಡಿಯ ಪಳ್ಳಿಗುಡ್ಡೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಪೊರೇಟ್ ಕ್ರಿಕೆಟ್ ಬ್ಯಾಷ್‌ಗೆ ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಬಾಳೆಬೈಲು ಶನಿವಾರ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ವಕೀಲ ಅಸದುಲ್ಲಾ ಕಟಪಾಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಪೊರೇಟ್ ಕ್ರಿಕೆಟನ್ನು ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯವಾದುದು. ಟೆನ್ನಿಸ್ ಬಾಲ್ ಕ್ರಿಕೆಟಿಗರ ಭವಿಷ್ಯ ನಿಧಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಷಿುೀಶನ್ ಶ್ರಮಿಶಬೇಕಾಗಿದೆ ಎಂದರು.
ಕೆ.ಆರ್.ಎಸ್. ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಉದಯಕುಮಾರ್ ವೈ ಮಾತನಾಡಿ, ಟೆನ್ನಿಸ್ ಬಾಲ್ ಕ್ರಿಕೆಟಿಗರು ಕೇವಲ ಟಿನ್ನಿಸ್ ಬಾಲ್ ಆಟಕ್ಕೆ ಸೀಮಿತಗೊಳ್ಳದೆ ಲೆದರ್‌ಬಾಲ್ ಕ್ರಿಕೆಟ್‌ನತ್ತ ಹೆಚ್ಚು ಒಲವು ತೆರಿಸಬೇಕು ಎಂದರು.
ಇತ್ತೀಚೆಗೆ ಮೃತಪಟ್ಟ ಕ್ರಿಕೆಟರ್ ಪ್ರಶಾಂತ್ ಪಾಂಗಾಳ ಅವರಿಗೆ ಶೃದ್ಧಾಂಜಲಿ ಸಮರ್ಪಿಸಲಾಯಿತು. ಪಂದ್ಯಾಟದ ಸಂಘಟಕರುಗಳಾದ ಶ್ರೀಕಾಂತ್ ಕಾಪು ಮತ್ತು ಜಯರಾಜ್, ಆದರ್ಶ್ ಫ್ರೆಂಡ್ಸ್‌ನ ಪ್ರವೀಣ್, ದುರ್ಗಾ ಫ್ರೆಂಡ್ಸ್‌ನ ಶೈಲೇಶ್, ತರುಣ್, ರಾಘು, ಜಸ್ಮೀರ್ ಉಪಸ್ಥಿತರಿದ್ದರು. ಶ್ಯಾಮ ಸುಂದರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.