ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ದೇಶದ 4 ವಿಮಾನ ನಿಲ್ದಾಣಗಳಿಗೆ ಪ್ರಶಸ್ತಿ
ಮಂಗಳೂರು, ಮಾ.9: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ದೇಶದ ನಾಲ್ಕು ವಿಮಾನ ನಿಲ್ದಾಣಗಳು ‘ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ’ ಲಭಿಸಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ಚಂಡೀಗಡ, ತಿರುವಂತನಪುರಂ ಹಾಗೂ ಲಕ್ನೋ ವಿಮಾನ ನಿಲ್ದಾಣಗಳು ಈ ಪ್ರಶಸ್ತಿಗೆ ಪಾತ್ರವಾಗಿವೆ. ಈ 4 ವಿಮಾನ ನಿಲ್ದಾಣಗಳು ಒಟ್ಟು 10 ವಿಭಾಗಗಳಲ್ಲಿ ಪ್ರಯಾಣಿಕರಿಗೆ ನೀಡಿದ ಉತ್ಕೃಷ್ಟ ಸೇವೆ, ವಿಶ್ವ ಗುಣಮಟ್ಟದ ಸೌಲಭ್ಯಗಳಿಗಾಗಿ ಈ ಪುರಸ್ಕಾರ ಸಂದಿದೆ ಎಂದು ಪ್ರಕಟನೆ ತಿಳಿಸಿದೆ.
ಜಾಗತಿಕ ಸಂಸ್ಥೆಯಾಗಿರುವ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ) ವತಿಯಿಂದ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ (ಎಎಸ್‌ಕ್ಯೂ)ಯು ಈ ಸರ್ವೆ ನಡೆಸಿದೆ. 2019ರಲ್ಲಿ ಜಗತ್ತಿನ 356 ವಿಮಾನ ನಿಲ್ದಾಣಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸರ್ವೆ ತಂಡವು ವಿಮಾನ ನಿಲ್ದಾಣಗಳಿಗೆ ಆಗಮಿಸಿದಾಗ ಪ್ರಯಾಣಿಕರು ವ್ಯಕ್ತಪಡಿಸುವ ಅಭಿಪ್ರಾಯ ಹಾಗೂ ಪ್ರಯಾಣಿಕರ ಸಂತೃಪ್ತಿಯನ್ನು ಆಧರಿಸಿ ಎಎಸ್‌ಕ್ಯೂ ಅಂಕಗಳನ್ನು ನೀಡುತ್ತದೆ ಎಂದು ಪ್ರಕಟನೆ ತಿಳಿಸಿದೆ.