‘ಸಮಾಜಶಾಸ್ತ್ರ ಅಧ್ಯಯನ ಸಮಾಜದಲ್ಲಿ ಮೌಲ್ಯ ಉಳಿಯಲು ಅಗತ್ಯ’
ಉಡುಪಿ, ಮಾ.9: ಇಂದು ನಶಿಸಿ ಹೋಗುತ್ತಿರುವ ಮೌಲ್ಯಗಳಿಗೆ ಸಮಾಜ ಶಾಸ್ತ್ರದ ಅಧ್ಯಯನ ಬಹಳ ಪ್ರಾಮುಖ್ಯವಾಗಿದೆ. ಹಿಂದಿನ ಸಮಾಜದ ಹಿರಿಯ ಅನುಭವ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಬರಬೇಕು ಎಂದು ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್ ಹೇಳಿದ್ದಾರೆ.
ಪೂರ್ಣಪ್ರಜ್ಞ ಕಾಲೇಜಿನ ಉಡುಪಿ ಸಮಾಜಶಾಸ್ತ್ರ ವಿಭಾಗ ಹಾಗೂ ಮಂಗಳೂರು ಸಮಾಜಶಾಸ್ತ್ರ ಸಂಘ ಜಂಟಿಯಾಗಿ ಪೂರ್ಣಪ್ರಜ್ಞ ಕಾಲೇಜಿ ನಲ್ಲಿ ಜಂಟಿಯಾಗಿ ಆಯೋಜಿಸಿದ್ದ ‘ಸಮಾಜಶಾಸ್ತ್ರ ಹಬ್ಬ-2020’ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು್ದೇಶಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಕಾರ್‌ಸ್ಟ್ರೀಟ್ ಮತ್ತು ಮಂಗಳೂರು ಸಮಾಜಶಾಸ್ತ್ರ ಸಂಘದ ಕಾಯದರ್ಶಿ ಡಾ. ಶೇಷಪ್ಪ ಕೆ. ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಮಾರು ಹೋಗಿ ದೇಶೀಯ ಸಂಸ್ಕೃತಿ ಮರೆಯಾಗದಂತೆ ನೋಡಿಕೊಳ್ಳುವ ಎಚ್ಚರ ಯುವಜನತೆಯಲ್ಲಿರಬೇಕು. ಮೌಡ್ಯತೆಗಳಿಂದ ಮುಕ್ತ ವಾದ ನಂಬಿಕೆಗಳು, ವೈಜ್ಞಾನಿಕ ಚಿಂತನೆ ಗಳಿಂದ ಕೂಡಿದ ಸಮಾಜ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಎಲ್. ಸ್ವಾಗತಿಸಿದರು. ವಿದ್ಯಾರ್ಥಿ ಶಿವರಾಜ್ ಕುಮಾರ್ ವಂದಿಸಿದರು. ಗೊಲ್ಲ ಸುರ್ಶನ್ ಕಾರ್ಯಕ್ರಮ ನಿರೂಪಿಸಿದರು.