ನಾಲ್ಕು ತಿಂಗಳಿನಿಂದ ಯುವಕ ನಾಪತ್ತೆ
Update: 2020-03-09 22:26 IST
ಕೋಟ, ಮಾ.9: ಕಾವಡಿ ಗ್ರಾಮದ ಹವರಾಲು ನಿವಾಸಿ ಪಾರ್ವತಿ ಮರಕಾಲ ಎಂಬವರ ಹಿರಿಯ ಮಗ ಸುಕುಮಾರ (22) ಎಂಬವರು ಕಳೆದ ನಾಲ್ಕು ತಿಂಗಳುಗಳಿಂದ ನಾಪತ್ತೆಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಿಗ್ರಾಮ ಮೇಳದಲ್ಲಿ ಪೆಟ್ಟಿಗೆ ಹೊರುವ ಕೆಲಸ ಮಾಡಿಕೊಂಡಿದ್ದ ಸುಕುಮಾರ್, 2019ರ ಡಿ.1ರಂದು ಮನೆಗೆ ಬಂದು ಕೆಲಸಕ್ಕೆ ಹೋಗುವು ದಾಗಿ ಹೇಳಿ ಹೋದವನು ಈವರೆಗೆ ವಾಪಾಸ್ಸು ಬಂದಿರುವುದಿಲ್ಲ. ಈ ಬಗ್ಗೆ ಸಾಲಿ ಗ್ರಾಮ ಮೇಳದವರಲ್ಲಿ ವಿಚಾರಿಸಿದಾಗ ಆತ 2019ನೇ ಜೂನ್ ತಿಂಗಳಲ್ಲಿ ಕೆಲಸ ಬಿಟ್ಟಿರುವುದಾಗಿ ತಿಳಿಸಿದ್ದರೆಂದು ದೂರಿನಲ್ಲಿ ಹೇಳಲಾಗಿದೆ.