ತೆಂಕನಿಡಿಯೂರು: ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಉದ್ಘಾಟನೆ
ಉಡುಪಿ, ಮಾ.10: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉದ್ಯೋಗ ಮಾಹಿತಿ ಘಟಕ ಹಾಗೂ ಉನ್ನತಿ ಪೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 100 ಗಂಟೆಗಳ ಕಾಲಾವಧಿಯ ವ್ಯಕ್ತಿತ್ವ ವಿಕಸನ ಉಚಿತ ತರಬೇತಿ ಶಿಬಿ ಮಂಗಳವಾರ ಉದ್ಘಾಟನೆಗೊಂಡಿತು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ತರಗತಿಯ ಅಧ್ಯಯ ನದ ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಇಂತಹ ತರಬೇತಿಯ ಕಾರ್ಯಕ್ರಮಗಳ ಮೂಲಕ ಪಡೆಯ ಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಜೀವನ ವೌಲ್ಯವನ್ನು ರೂಢಿಸಿಕೊಳ್ಳುವುದರ ಮೂಲಕ ಪೋಷಕರಿಗೆ, ಗುರುಗಳಿಗೆ ಗೌರವ ತರುವಂತೆ ನಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಉನ್ನತಿ ಪೌಂಡೇಶನ್‌ನ ಸೀನಿಯರ್ ಕನ್ಸ್‌ಲ್ಟೆಂಟ್ ತರಬೇತುದಾರ ನವೀನ್ ನಾಯಕ್ ಮಾತನಾಡಿ, ಈ ಕೌಶಲ್ಯದ ತರಬೇತಿಯನ್ನು ಉನ್ನತಿ ಅಕಾಡೆಮಿಯು ಉಚಿತವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ನೆರವನ್ನು ಪಡೆದುಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ತಮಗೆ ಸೂಕ್ತವಾದ ಬೇರೆ ಬೇರೆ ಉದ್ಯೋಗ ಗನ್ನು ಪಡೆಯಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಉನ್ನತಿ ಪೌಂಡೇಶನ್‌ನ ಸೀನಿಯರ್ ಕನ್ಸ್‌ಲ್ಟೆಂಟ್ ತರಬೇತುದಾರ ನವೀನ್ ನಾಯಕ್ ಮಾತನಾಡಿ, ಈ ಕೌಶಲ್ಯದ ತರಬೇತಿಯನ್ನು ಉನ್ನತಿ ಅಕಾಡೆಮಿಯು ಉಚಿತವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ನೆರವನ್ನು ಪಡೆದುಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ತಮಗೆ ಸೂಕ್ತವಾದ ಬೇರೆ ಬೇರೆ ಉದ್ಯೋಗ ಗಳನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕಗಳನ್ನು, ರ್ಯಾಂಕ್‌ಗಳನ್ನು ಪಡೆಯುವುದರ ಜೊತೆಗೆ ತರಬೇತಿ ಪಡೆಯುವ ಮೂಲಕವೂ ಉನ್ನತ ಹುದ್ದೆಗಳನ್ನು ಪಡೆಯೇಕೆಂದು ಕಿವಿಮಾತು ಹೇಳಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ಸ್ನಾತಕೋತ್ತರ ಪದವಿ ವಿಭಾಗದ ಉದ್ಯೋಗ ಮಾಹಿತಿ ಘಟಕದ ಸಂಚಾಲಕ ಡಾ. ಹೆಚ್.ಕೆ. ವೆಂಕಟೇಶ್ ಸ್ವಾಗತಿಸಿದರು. ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಶರ್ಮಿಳಾ ಹಾರಾಡಿ ನಿರೂಪಿಸಿದರು. ಪದವಿ ವಿಬಾಗದ ಉದ್ಯೋಗ ಮಾಹಿತಿ ಘಟಕದ ಸಂಚಾಲಕ ಪ್ರೊ.ಉಮೇಶ್ ಪೈ ವಂದಿಸಿದರು.