×
Ad

ಕೊರೋನವೈರಸ್: ಜಾಗತಿಕ ಆರ್ಥಿಕತೆಗೆ 2 ಟ್ರಿಲಿಯ ಡಾಲರ್ ಹೊಡೆತ

Update: 2020-03-10 21:48 IST

ಜಿನೀವ (ಸ್ವಿಟ್ಸರ್‌ ಲ್ಯಾಂಡ್), ಮಾ. 10: ವಿಶ್ವಾದ್ಯಂತ ಹರಡುತ್ತಿರುವ ಮಾರಕ ಕೊರೋನವೈರಸ್ ಈ ವರ್ಷ ಜಾಗತಿಕ ಆರ್ಥಿಕತೆಗೆ ಒಂದರಿಂದ ಎರಡು ಟ್ರಿಲಿಯನ್ ಡಾಲರ್ (ಸುಮಾರು 147 ಲಕ್ಷ ಕೋಟಿ ರೂಪಾಯಿ) ಹೊಡೆತ ನೀಡಬಹುದಾಗಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ತಜ್ಞರು ಸೋಮವಾರ ಎಚ್ಚರಿಸಿದ್ದಾರೆ.

ಅದೇ ವೇಳೆ, ಈ ಆರ್ಥಿಕ ಹೊಡೆತದ ಪರಿಣಾಮವನ್ನು ತಗ್ಗಿಸಲು ಹೆಚ್ಚು ಪ್ರಮಾಣದಲ್ಲಿ ಖರ್ಚು ಮಾಡುವಂತೆ ಅವರು ದೇಶಗಳಿಗೆ ಕರೆ ನೀಡಿದ್ದಾರೆ.

ಕೋವಿಡ್-19 (ನೂತನ-ಕೊರೋನವೈರಸ್‌ನ ಅಧಿಕೃತ ಹೆಸರು) ಸಾಂಕ್ರಾಮಿಕವು ಕೆಲವು ದೇಶಗಳನ್ನು ಆರ್ಥಿಕ ಹಿಂಜರಿತದ ದವಡೆಗೆ ದೂಡುತ್ತದೆ ಹಾಗೂ ಒಟ್ಟಾರೆ ಜಾಗತಿಕ ಆರ್ಥಿಕತೆಯ ಬೆಳವಣಿಗೆಯನ್ನು ಗಮನಾರ್ಹವಾಗಿ ತಗ್ಗಿಸುತ್ತದೆ ಎಂಬ ನಿರ್ಧಾರಕ್ಕೆ ವಿಶ್ವಸಂಸ್ಥೆಯ ವ್ಯಾಪಾರ, ಹೂಡಿಕೆ ಮತ್ತು ಅಭಿವೃದ್ಧಿ ಕುರಿತ ಸಮ್ಮೇಳನ (ಅಂಕ್ಟಾಡ್) ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News