×
Ad

ಬಿಸಿಯೂಟ ನೌಕರರಿಂದ ಪ್ರತಿಭಟನಾ ಮೆರವಣಿಗೆ

Update: 2020-03-10 21:56 IST

ಬೈಂದೂರು, ಮಾ.10: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಬಿಸಿಯೂಟ ನೌಕರರ ಬೇಡಿಕೆಗಳನ್ನು ಕಡೆಗಣಿಸಿದ ಸರಕಾರದ ವಿರುದ್ಧ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಬೈಂದೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ಅಕ್ಷರ ದಾಸೋಹ-ಬಿಸಿಯೂಟ ನೌಕರರ ಪ್ರತಿಭಟನಾ ಮೆರ ವಣಿಗೆಯನ್ನು ಮಂಗಳವಾರ ಬೈಂದೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ ಮಾತನಾಡಿ, ಏಳನೇ ವೇತನ ಆಯೋಗದ ಶಿಪಾರಾಸ್ಸಿನಂತೆ 18000ರೂ. ಮಾಸಿಕ ವೇತನ ಕೊಡಬೇಕು. ಬಿಸಿಯೂಟ ನೌಕರರನ್ನು 4ನೇ ದರ್ಜೆಯ ನೌಕರರಾಗಿ ಪರಿಗಣಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಸಿಐಟಿಯು ಮುಖಂಡರಾದ ರೊನಾಲ್ಡ್ ರಾಜೇಶ ಕ್ವಾಡ್ರಸ್, ಉದಯ ಗಾಣಿಗ ಮೊಗೇರಿ, ಗಣೇಶ ತೊಂಡೆಮಕ್ಕಿ, ಮಂಜು ಪಡುವರಿ, ಜಯಶ್ರೀ, ಸಿಂಗಾರಿ ನಾವುಂದ, ಶಾರದ ಬೈಂದೂರು, ಶಾರದ ಶಿರೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News