ಅಕ್ರಮ ಗಾಂಜಾ ಮಾರಾಟ: ಆರೋಪಿ ಬಂಧನ
Update: 2020-03-10 22:03 IST
ಉಡುಪಿ, ಮಾ.10: ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಪೊಲೀಸರು ಇಂದು ಬೆಳಗ್ಗೆ ನಗರದ ಬನ್ನಂಜೆ ಗರಡಿ ರಸ್ತೆ ಎಂಬಲ್ಲಿ ಬಂಧಿಸಿದ್ದಾರೆ.
ಉಡುಪಿ ಪುತ್ತೂರು ಗ್ರಾಮದ ಕುದ್ಮಾಲ್ ರಂಗರಾವ್ ನಗರದ ಬಾಡಿಗೆ ಮನೆ ನಿವಾಸಿ ಚಾಂದ್ ಬಾಷಾ(30) ಬಂಧಿತ ಆರೋಪಿ. ಈತನಿಂದ 25 ಸಾವಿರ ರೂ. ಮೌಲ್ಯದ 1ಕೆ.ಜಿ. 150ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್, ಒಂದು ಲಕ್ಷ ರೂ. ಮೌಲ್ಯದ ಆಟೋರಿಕ್ಷಾವನ್ನು ವಶಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.