ಕಾರ್ಕಳ: ಪೋಕ್ಸೋ ಪ್ರಕರಣ ದಾಖಲು
Update: 2020-03-10 22:19 IST
ಉಡುಪಿ, ಮಾ.10: ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ದೂರಿನಂತೆ ಕಾರ್ಕಳದ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯ ಮನೆಗೆ ಭೇಟಿ ನೀಡಲಾಯಿತು.
ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ, ಇನ್ಸ್‌ಪೆಕ್ಟರ್ ಸಂಪತ್‌ಕುಮಾರ್ ಮಾರ್ಗದರ್ಶನದಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬಾಲಕಿಗೆ ಹಾಗೂ ಪೋಷಕರಿಗೆ ಬಾಲ್ಯವಿವಾಹ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿ, ಪೋಷಕರ ದೂರಿನಂತೆ ಆರೋಪಿ ಅಕ್ಷತ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾರ್ಕಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕುಮಾರ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಸಹಾಯಕ ಉಪನಿರೀಕ್ಷಕ ಶುಭಕರ, ಅಂಗನವಾಡಿ ಕಾರ್ಯಕರ್ತೆ ತರುಣ ಭಾಗವಹಿಸಿದ್ದರು.