×
Ad

ಸತ್ಯ ಮನೆ ಮನೆಗೆ ತಲುಪಿಸಿ, ವೈರತ್ವ ತನ್ನಿಂತಾನೆ ಕೊನೆಗೊಳ್ಳುತ್ತದೆ- ರಫೀಉದ್ದೀನ್ ಕುದ್ರೋಳಿ

Update: 2020-03-10 22:25 IST

ಮಂಗಳೂರು : ಭಾರತದಲ್ಲಿ ಮುಸ್ಲಿಮರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಹಿಂಸೆ ಕೊನೆ ಕೊಳ್ಳಬೇಕೆಂದರೆ ದೇಶಬಾಂಧವರಲ್ಲಿ ನಮ್ಮ ಬಗೆಗಿರುವ ತಪ್ಪುಕಲ್ಪನೆಗಳನ್ನು ನೀಗಿಸಬೇಕು ಅದಕ್ಕಾಗಿ ಸತ್ಯವನ್ನು (ಧರ್ಮವನ್ನು) ಮನೆಮನೆಗೆ ತಲುಪಿಸ ಬೇಕೆಂದು ಯುನಿವೆಫ್  ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿದರು.

ಅವರು ಯುನಿವೆಫ್ ಕರ್ನಾಟಕದ "ಬದಲಾವಣೆಗಾಗಿ ನಾನು" ಎಂಬ ಶೀರ್ಷಿಕೆಯಲ್ಲಿ 50 ದಿನಗಳ ಕಾಲ ನಡೆಯುವ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಸ್ಲಾಂ ಸಾರ್ವಕಾಲಿಕ ಹಾಗು ಸಾರ್ವತ್ರಿಕ ಧರ್ಮವಾಗಿದೆ ಮತ್ತು ಜಗತ್ತಿನ ಪ್ರತಿಯೊಬ್ಬ ಮನುಷ್ಯನ ಜೀವನ ವ್ಯವಸ್ಥೆಯೂ ಆಗಿದೆ ಅದನ್ನು ಅವರಿಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಈ ಕೆಲಸವನ್ನು ಮಾಡದೆ ಇತರ ಯಾವುದೇ ಮಾರ್ಗದ ಮೂಲಕ ಮುಸ್ಲಿಮರ ಸಬಲೀಕರಣ ಸಾಧ್ಯವಿಲ್ಲ ಎಂದವರು ಹೇಳಿದರು.

ಅಭಿಯಾನವು  ಜಿಲ್ಲೆಯಾದ್ಯಂತ  ನಡೆಯಲಿದೆ.

ಕಾರ್ಯದರ್ಶಿಗಳಾದ ಖಾಲಿದ್ ಯುಕೆ, ಸೈಫುದ್ದೀನ್ ಕುದ್ರೋಳಿ, ಜಿಲ್ಲಾಧ್ಯಕ್ಷರಾದ ನೌಫಲ್ ಹಸನ್, ಸಮಾಜ ಸೇವಾ ಘಟಕ "ಅಭಯ"ದ ಸಂಚಾಲಕರಾದ ಅಡ್ವೊಕೇಟ್ ಸಿರಾಜುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿಯಾನ ಸಂಚಾಲಕ ಹುದೈಫ್ ಕುದ್ರೋಳಿ ಕಾರ್ಯಕ್ರಮ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಮರ್ ಮುಖ್ತಾರ್ ಕಿರ ಅತ್ ಪಠಿಸಿದರು ಮತ್ತು ಮಂಗಳೂರು ಶಾಖೆಯ ಅಧ್ಯಕ್ಷ ಅಬ್ದುಲ್ಲಾ ಪಾರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News