ಮಾ.11: ಕೊಡಾಜೆಯಲ್ಲಿ ಫಿಖ್‌ಹ್ ಸೆಮಿನಾರ್
Update: 2020-03-10 22:26 IST
ಮಂಗಳೂರು, ಮಾ.10: ದಾರಿಮೀಸ್ ಅಸೋಸಿಯೇಶನ್ ದ.ಕ.ಜಿಲ್ಲಾ ಸಮಿತಿಯ 18ನೆ ವಾರ್ಷಿೋತ್ಸವದ ಅಂಗವಾಗಿ ಫಿಖ್‌ಹ್ ಸೆಮಿನಾರ್ ಮತ್ತು ಶಂಸುಲ್ ಉಲಮಾ ಆಂಡ್ ನೇರ್ಚೆಯು ಮಾ.11ರಂದು ಬೆಳಗ್ಗೆ 8:30ರಿಂದ ಕೊಡಾಜೆಯ ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಲಿದೆ.
ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶೈಖುನಾ ಎವಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಕೆ. ಮಾಹಿನ್ ಮುಸ್ಲಿಯಾರ್ ತೊಟ್ಟಿ ದುಆಗೈಯುವರು ಎಂದು ದಾರಿಮೀಸ್ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.