×
Ad

ಯುವಕ ನಾಪತ್ತೆ: ದೂರು

Update: 2020-03-10 23:02 IST

ಪುತ್ತೂರು: ತಾಲೂಕಿನ ಬನ್ನೂರು ಗ್ರಾಮದ ನೆಕ್ಕಿಲು ನಿವಾಸಿ ಗೌರಿ ಎಂಬವರ ಪುತ್ರ ಮಹೇಶ್ (24) ಎಂಬವರು  ಮಾ. 5 ರಿಂದ ನಾಪತ್ತೆಯಾಗಿರುವುದಾಗಿ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ಮಹೇಶ್ ಅವರು ಮಾ. 5 ರಂದು ಮನೆಯಿಂದ ಹೊರಹೋದವರು ಮರಳಿ ಮನೆಗೆ ಬಾರದೆ ನಾಪತ್ತೆ ಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News